ನಾಡ ದೋಣಿ ಮೀನುಗಾರರಿಗೆ ಈ ವರ್ಷದಷ್ಟು ನಷ್ಟ ಯಾವತ್ತೂ ಆಗಿಲ್ಲ. ನಮಗೆ ಸಿಗುವುದು ಎರಡು ತಿಂಗಳ ಅವಧಿ. ಸಮುದ್ರ ಪ್ರಕ್ಷುಬ್ದಗೊಂಡಿದ್ದ ಕಾರಣದಿಂದ ಹಲವು ದಿನ ಕಡಳಿಗಿಳಿಯಲಾಗಿಲ್ಲ. ಕಡಲಿಗಿಳಿದರೂ ಮೀನುಗಳೇ ಸಿಗುತ್ತಿಲ್ಲ.
ಸುಂದರ್ ಸಾಲ್ಯಾನ್, ಸಾಂಪ್ರದಾಯಿಕ ನಾಡ ದೋಣಿ ಮೀನುಗಾರರ ಸಂಘದ ಅಧ್ಯಕ್ಷ
ಈ ಬಾರಿ ಕಡಲ್ಲಲಿ ಪದೇ ಪದೇ ತೂಫಾನ್ ಎದ್ದಿದ್ದರೂ ಮೀನುಗಳೇ ಸಿಗುತ್ತಿಲ್ಲ. ಎರೆಬಾಯಿ ಮೊದಲಾದ ಮೀನುಗಳನ್ನು ಬಿಟ್ಟು ಒಳ್ಳೆಯ ಮತ್ಸಗಳು ಸಿಗುತ್ತಿಲ್ಲ.
ನವೀನ್ ಜತ್ತನ್, ನಾಡ ದೋಣಿ ಮಾಲಕ ಮಲ್ಪೆ
ನಾಡ ದೋಣಿಯಲ್ಲಿ ಒಂದು ಸಲ ಮೀನು ಹಿಡಿಯಲು ಹೋಗಿ ಬರುವಾಗ ಸೀಮೆ ಎಣ್ಣೆಯ ವೆಚ್ಚವೂ ಸೇರಿ ಕನಿಷ್ಠ ₹3ಸಾವಿರ ಖರ್ಚಾಗುತ್ತದೆ. ಮೀನು ಸಿಗದಿದ್ದರೆ ಎಲ್ಲವೂ ನಷ್ಟ.