ಕುಂದಾಪುರ: ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠ 2025ರಲ್ಲಿ 550 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಸಂಸ್ಥಾನದ ಮಠಾಧೀಶ ವಿದ್ಯಾಧೀಶತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಅವರು 550 ಕೋಟಿ ರಾಮ ತಾರಕ ಮಂತ್ರ ಜಪ ಅಭಿಯಾನ ಸಂಕಲ್ಪಿಸಿದ್ದು, ಗಂಗೊಳ್ಳಿಯ ಮಲ್ಯರಮಠ ವೆಂಕಟರಮಣ ದೇವಸ್ಥಾನದಲ್ಲಿ ಬುಧವಾರ ಚಾಲನೆ ನೀಡಲಾಯಿತು. ಅಭಿಯಾನವು 2025ರ ಏ. 18ರವರೆಗೆ ನಿರಂತರವಾಗಿ ನಡೆಯಲಿದೆ.

ಬೆಳಿಗ್ಗೆ ದೇವರಿಗೆ ವಿಶೇಷ ಪೂಜೆ ನಡೆದ ಬಳಿಕ, ವಿಶೇಷ ಪ್ರಾರ್ಥನೆ ಸಲ್ಲಿಸಿ ದೇವಸ್ಥಾನದ ಪ್ರಧಾನ ಅರ್ಚಕ ಎಸ್. ವೆಂಕಟರಮಣ ಆಚಾರ್ಯ ರಾಮ ತಾರಕ ಮಂತ್ರ ಪಠಿಸಿ ಅಭಿಯಾನಕ್ಕೆ ಚಾಲನೆ ನೀಡಿದರು.

ದೇವಸ್ಥಾನ ಆಡಳಿತ ಮೊಕ್ತೇಸರ ಎನ್. ಸದಾಶಿವ ನಾಯಕ್, ಜಿ. ವೆಂಕಟೇಶ ನಾಯಕ್, ಕೆ. ಗೋಪಾಲಕೃಷ್ಣ ನಾಯಕ್, ದೇವಸ್ಥಾನದ ತಂತ್ರಿ ಜಿ. ವಸಂತ ಭಟ್, ಪುರೋಹಿತರಾದ ಜಿ. ರಾಘವೇಂದ್ರ ಆಚಾರ್ಯ, ಜಿ. ಅನಂತಕೃಷ್ಣ ಭಟ್, ಆಡಳಿತ ಮಂಡಳಿ ಸದಸ್ಯರು, ಅರ್ಚಕರು, ಜಿಎಸ್ಬಿ ಸಮಾಜ ಬಾಂಧವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.