ಬೈಂದೂರು (ಉಡುಪಿ ಜಿಲ್ಲೆ): ತಾಲ್ಲೂಕಿನ ಬಿಜೂರು ಗ್ರಾಮದ ಕಬ್ಸೆಯಲ್ಲಿ ಬುಧವಾರ ಚಾಕ್ಲೆಟ್ ಗಂಟಲಿನಲ್ಲಿ ಸಿಲುಕಿ ಬಾಲಕಿ ಮೃತಪಟ್ಟಿದ್ದಾಳೆ.

ಉಪ್ಪುಂದದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಒಂದನೇ ತರಗತಿ ವಿದ್ಯಾರ್ಥಿನಿ ಸಮನ್ವಿ ಮೃತ ಬಾಲಕಿ. ಬೆಳಿಗ್ಗೆ ಬಾಲಕಿ ಅವಸರದಲ್ಲಿ ಶಾಲಾ ಬಸ್ ಹತ್ತಲು ಓಡುವಾಗ ಕವರ್ ಸಹಿತ ಚಾಕ್ಲೆಟ್ ಬಾಯಿಗೆ ಹಾಕಿಕೊಂಡಿದ್ದಾಳೆ. ಈ ಸಂದರ್ಭ ಆಕ್ಮಿಕವಾಗಿ ಚಾಕ್ಲೆಟ್ ನುಂಗಿದ್ದು ಗಂಟಲಿನಲ್ಲಿ ಸಿಲುಕಿಕೊಂಡಿದೆ. ನಂತರ ಉಸಿರಾಡಲು ಕಷ್ಟವಾಗಿ ಸಮನ್ವಿ ಶಾಲಾ ವಾಹನದ ಬಳಿಯೇ ಕುಸಿದು ಬಿದ್ದಿದ್ದಾಳೆ.

ಕೂಡಲೇ ಪೋಷಕರು, ಶಾಲಾ ವಾಹನದ ಚಾಲಕ ಹಾಗೂ ಸ್ಥಳೀಯರು ಬಾಲಕಿಯನ್ನು ಬೈಂದೂರಿನ ಆಸ್ಪತ್ರೆಗೆ ಕರೆದೊಯ್ದರೂ ಅಷ್ಟರಲ್ಲಿ ಸಮನ್ವಿ ಮೃತಪಟ್ಟಿದ್ದಾಳೆ.

ಮರಣೋತ್ತರ ಪರೀಕ್ಷೆಯ ಬಳಿಕ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ. ಬಾಲಕಿಯ ಸಾವಿಗೆ ಸಂತಾಪ ಸೂಚಿಸಲು ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಗೆ ಒಂದು ದಿನ ರಜೆ ಘೋಷಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.