ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉಡುಪಿ | ಕಸ್ತೂರಿರಂಗನ್‌ ವರದಿ ವಿಚಾರ: ಗ್ರಾ.ಪಂ. ಸದಸ್ಯರಿಂದ ಮತದಾನ ಬಹಿಷ್ಕಾರ

Published : 22 ಅಕ್ಟೋಬರ್ 2024, 6:27 IST
Last Updated : 22 ಅಕ್ಟೋಬರ್ 2024, 6:27 IST
ಫಾಲೋ ಮಾಡಿ
Comments
ಬೈಂದೂರು ತಾಲ್ಲೂಕಿನ ಜಡ್ಕಲ್‌ ಗ್ರಾಮ ಪಂಚಾಯಿತಿಯ ಮತಗಟ್ಟೆ
ಬೈಂದೂರು ತಾಲ್ಲೂಕಿನ ಜಡ್ಕಲ್‌ ಗ್ರಾಮ ಪಂಚಾಯಿತಿಯ ಮತಗಟ್ಟೆ
ಮತದಾರರ ಮನವೊಲಿಸಲು ಹಲವು ಬಾರಿ ಸಭೆಗಳನ್ನು ಮಾಡಿದ್ದೆವು. ಕಸ್ತೂರಿ ರಂಗನ್‌ ವರದಿಯನ್ನು ರಾಜ್ಯ ಸರ್ಕಾರ ಒಪ್ಪಿಲ್ಲ ಎಂಬುದನ್ನೂ ಮನವರಿಕೆ ಮಾಡಲು ಪ್ರಯತ್ನಿಸಿದ್ದೆವು. ಆದರೂ ಕೆಲವರು ಈ ವಿಚಾರವನ್ನು ಮುಂದಿಟ್ಟುಕೊಂಡು ಮತದಾನ ಮಾಡಿಲ್ಲ
ಮಮತಾದೇವಿ ಜಿ.ಎಸ್‌. ಹೆಚ್ಚುವರಿ ಜಿಲ್ಲಾಧಿಕಾರಿ
ಕಸ್ತೂರಿರಂಗನ್‌ ವರದಿಯಿಂದ ಕಂದಾಯ ಭೂಮಿಯನ್ನು ಹೊರಗಿಡಬೇಕು. ವನ್ಯಜೀವಿಗಳ ಸಂರಕ್ಷಿತಾರಣ್ಯಗಳನ್ನು ಮಾತ್ರ ಸೇರಿಸಬೇಕು. ವರದಿ ಬಗ್ಗೆ ನಮಗೆ ಅಧಿಕಾರಿಗಳು ಸೂಕ್ತ ಮಾಹಿತಿ ನೀಡಿಲ್ಲ. ಈ ಕಾರಣಕ್ಕೆ ಮತದಾನ ಬಹಿಷ್ಕರಿಸಿದ್ದೇವೆ
ರವೀಂದ್ರ ಶೆಟ್ಟಿ ಕೆರಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ
ಕಸ್ತೂರಿರಂಗನ್‌ ವರದಿ ಇನ್ನೂ ಜಾರಿಯಾಗದಿದ್ದರೂ ಭೂ ಪರಿವರ್ತನೆಗಾಗಿ ಸಲ್ಲಿಸಿರುವ ಸುಮಾರು 25 ಅರ್ಜಿಗಳನ್ನು ತಡೆ ಹಿಡಿಯಲಾಗಿದೆ. ಈ ಕುರಿತು ಅಧಿಕಾರಿಗಳ ಗಮನ ಸೆಳೆದರೂ ಯಾವುದೇ ಪ್ರಯೋಜನವಾಗಿಲ್ಲ ಈ ಕಾರಣಕ್ಕೆ ಮತದಾನದಿಂದ ದೂರ ಉಳಿದಿದ್ದೇವೆ
ಪಾರ್ವತಿ ಜಡ್ಕಲ್‌ ಗ್ರಾಮ ಪಂಚಾಯಿತಿ ಅಧ್ಯಕ್ಷೆ
ಜಿಲ್ಲೆಯಲ್ಲಿ ಶೇ 96.57ರಷ್ಟು ಮತದಾನ
ವಿಧಾನಪರಿಷತ್ ಉಪ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಶೇ 96.57ರಷ್ಟು ಮತದಾನವಾಗಿದೆ. ಬೈಂದೂರು ತಾಲ್ಲೂಕಿನಲ್ಲಿ ಶೇ 88.80ರಷ್ಟು ಕುಂದಾಪುರ ತಾಲ್ಲೂಕಿನಲ್ಲಿ ಶೇ 93.59ರಷ್ಟು ಬ್ರಹ್ಮಾವರದಲ್ಲಿ ಶೇ 98.83ರಷ್ಟು ಉಡುಪಿಯಲ್ಲಿ ಶೇ 99.18ರಷ್ಟು ಕಾಪು ತಾಲ್ಲೂಕಿನಲ್ಲಿ ಶೇ 97.77ರಷ್ಟು ಹೆಬ್ರಿಯಲ್ಲಿ ಶೇ 99.18ರಷ್ಟು ಹಾಗೂ ಕಾರ್ಕಳ ತಾಲ್ಲೂಕಿನಲ್ಲಿ ಶೇ 99.28ರಷ್ಟು ಮತದಾನವಾಗಿದೆ.
ಫಲ ನೀಡದ ಅಧಿಕಾರಿಗಳ ಪ್ರಯತ್ನ
ಉಡುಪಿ:  ವಿಧಾನಪರಿಷತ್ ಉಪ ಚುನಾವಣೆಯನ್ನು ಬಹಿಷ್ಕರಿಸದಂತೆ ಕುಂದಾಪುರ ಮತ್ತು ಬೈಂದೂರು ತಾಲ್ಲೂಕಿನ ಕೆಲ ಗ್ರಾಮ ಪಂಚಾಯಿತಿ ಸದಸ್ಯರ ಮನವೊಲಿಸಲು ಅಧಿಕಾರಿಗಳು ಪ್ರಯತ್ನಿಸಿದ್ದರೂ ಫಲ ನೀಡಲಿಲ್ಲ. ಕಸ್ತೂರಿ ರಂಗನ್‌ ವರದಿ ಬಾಧಿತ ಪ್ರದೇಶಗಳ ಪಂಚಾಯಿತಿ ಸದಸ್ಯರು ಮತದಾನ ಬಹಿಷ್ಕರಿಸುವುದಾಗಿ ಕರೆ ನೀಡಿದ ಬಳಿಕ ಹೆಚ್ಚುವರಿ ಜಿಲ್ಲಾಧಿಕಾರಿ ಸೇರಿದಂತೆ ಅಧಿಕಾರಿಗಳು ಮತದಾರರ ಮನವೊಲಿಸಲು ಪ್ರಯತ್ನಿಸಿದ್ದರು. ಮತದಾನ ದಿನವಾದ ಸೋಮವಾರವೂ ತಹಶೀಲ್ದಾರ್‌ ಸೇರಿದಂತೆ ಅಧಿಕಾರಿಗಳು ಪಂಚಾಯಿತಿ ಸದಸ್ಯರ ಮನವೊಲಿಕೆಗೆ ಯತ್ನಿಸಿದ್ದರೂ ಅವರ ಪ್ರಯತ್ನ ಕೂಡ ಸಫಲವಾಗಲಿಲ್ಲ. ಕಸ್ತೂರಿ ರಂಗನ್‌ ವರದಿಯಿಂದ ತಮ್ಮ ಗ್ರಾಮಗಳನ್ನು ಹೊರಗಿಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮತದಾನ ಬಹಿಷ್ಕರಿಸಲಾಗಿದೆ. ಜಡ್ಕಲ್‌ ಮತ್ತು ಕೆರಾಡಿ ಗ್ರಾಮ ಪಂಚಾಯಿತಿಗಳಲ್ಲಷ್ಟೇ ಚುನಾವಣೆ ಬಹಿಷ್ಕರಿಸಲಾಗಿದೆ. ಬೈಂದೂರು ಕುಂದಾಪುರ ವ್ಯಾಪ್ತಿಯ ಇತರ ಕೆಲವು ಪಂಚಾಯಿತಿಗಳಲ್ಲಿ ಕೆಲವರಷ್ಟೇ ಮತದಾನ ಮಾಡಿಲ್ಲ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್‌. ತಿಳಿಸಿದರು. ಕಸ್ತೂರಿ ರಂಗನ್‌ ವರದಿಯ ಕುರಿತು ಆರನೇ ಅಧಿಸೂಚನೆ ಹೊರಡಿಸಿದ ಬಳಿಕ ಇಲ್ಲಿನ ಜನರಲ್ಲಿ ಆತಂಕ ಮೂಡಿದೆ. ಈ ಕಾರಣಕ್ಕೆ ಜನರ ಮನವಿಯನ್ನು ಮನ್ನಿಸಿ ನಾವು ಮತದಾನದಿಂದ ದೂರ ಉಳಿದಿದ್ದೇವೆ ಎಂದು ಕೆರಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರವೀಂದ್ರ ಶೆಟ್ಟಿ ತಿಳಿಸಿದ್ದಾರೆ. ಪಕ್ಷದ ಒತ್ತಾಯದ ಹೊರತಾಗಿಯೂ ನಾವು ಜನರ ಪರವಾಗಿ ನಿಂತಿದ್ದೇವೆ. ನಮ್ಮ ಸಮಸ್ಯೆಗಳಿಗೆ ಪರಿಹಾರ ಒದಗಿಸದಿದ್ದರೆ ಮುಂದಿನ ಚುನಾವಣೆಗಳನ್ನು ಕೂಡ ಬಹಿಷ್ಕರಿಸಲಿದ್ದೇವೆ ಎಂದೂ ಹೇಳಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT