ಉಡುಪಿ: ತರಕಾರಿ, ಹಣ್ಣುಗಳ ಬೆಲೆ ಏರಿಕೆ ಜೊತೆಗೆ ಕೋಳಿ ಮೊಟ್ಟೆ ದರವೂ ಗಗನಕ್ಕೇರಿರುವುದರಿಂದ ಗ್ರಾಹಕರಿಗೆ ಬರೆ ಎಳೆದಂತಾಗಿದೆ.

ಕಳೆದ ವಾರ ಒಂದು ಮೊಟ್ಟೆಗೆ ₹7 ಇತ್ತು. ಈ ವಾರ ಮೊಟ್ಟೆ ದರವು ₹7.50 ಕ್ಕೆ ಏರಿಕೆಯಾಗದೆ. ಇದರಿಂದ ಮೊಟ್ಟೆ ಪ್ರಿಯರ ಜೇಬಿಗೆ ಹೊರೆ ಬಿದ್ದಿದೆ.

ಕೋಳಿ ಮೊಟ್ಟೆಗೆ ಬೇಡಿಕೆ ಹೆಚ್ಚಾಗಿರುವುದರಿಂದ ದರ ಏರಿಕೆಯಾಗಿದೆ. ಒಂದು ಮೊಟ್ಟೆಗೆ ಸಗಟು ದರದಲ್ಲಿ ₹6 ಇದ್ದರೆ, ಚಿಲ್ಲರೆ ದರ ₹7.50 ಆಗಿದೆ ಎನ್ನುತ್ತಾರೆ ಆದಿ ಉಡುಪಿಯ ವ್ಯಾಪಾರಿ ಫಿರೋಜ್.

ಕೋಳಿಗೆ ಹಾಕುವ ಆಹಾರದ ಬೆಲೆ ಅಧಿಕವಾಗುತ್ತಲೇ ಇದೆ. ಇದರಿಂದ ಕೋಳಿ ಸಾಕಣೆಗಾರರಿಗೆ ತೊಂದರೆಯಾಗಿದೆ. ಉತ್ಪಾದನೆ ವೆಚ್ಚ ಹೆಚ್ಚಳವಾಗಿರುವುದರಿಂದ ಮೊಟ್ಟೆಯ ದರ ಕೂಡ ಏರಿಕೆಯಾಗಿದೆ. ಕೇಕ್ ಮಾಡಲು ಕೋಳಿಮೊಟ್ಟೆಯನ್ನು ಹೆಚ್ಚಾಗಿ ಬಳಸುತ್ತಾರೆ ಈ ಕಾರಣಕ್ಕೆ ಕ್ರಿಸ್ಮಸ್ ವೇಳೆ ಕೋಳಿ ಮೊಟ್ಟೆಯ ದರ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು.

ಕೆಲವೆಡೆ ವಿಪರೀತ ಮಳೆಯಿಂದಾಗಿ ತರಕಾರಿ ಬೆಳೆ ನಾಶವಾದ ಕಾರಣ ತರಕಾರ ದರ ಕೂಡ ಏರಿಕೆಯಾಗಿದೆ. ಈ ಕಾರಣಕ್ಕೆ ಹೆಚ್ಚಿನ ಗ್ರಾಹಕರು ಕೋಳಿ ಮೊಟ್ಟೆ ಖರೀದಿಸುತ್ತಿದ್ದರು, ಈಗ ಮೊಟ್ಟೆಯೂ ದುಬಾರಿಯಾಗಿದೆ. ದೀಪಾವಳಿ ಹಬ್ಬ ಕಳೆದರೂ ತರಕಾರಿ ಬೆಲೆ ಇಳಿಕೆಯಾಗಿಲ್ಲ. ಸಾಮಾನ್ಯವಾಗಿ ಹಬ್ಬದ ಸಂದರ್ಭದಲ್ಲಿ ತರಕಾರಿಗಳ ಬೆಲೆ ಏರಿಕೆಯಾದರೆ, ಮತ್ತೆ ಕಡಿಮೆಯಾಗುತ್ತಿತ್ತು. ಈ ಬಾರಿ ತರಕಾರಿ ಬೆಲೆ ಏರುಮುಖವಾಗಿಯೇ ಇದೆ.

ಸಗಟು ಮಾರುಕಟ್ಟೆಯಲ್ಲಿ ಆವಕ ಕಡಿಮೆಯಾಗಿರುವುದರಿಂದ ತರಕಾರಿ ಬೆಲೆ ಇಳಿಕೆಯಾಗಿಲ್ಲ. ತರಕಾರಿ ಬೆಳೆಯುತ್ತಿರುವ ಕೆಲವು ಪ್ರದೇಶಗಳಲ್ಲಿ ಹಿಂಗಾರು ಮಳೆಯೂ ಜೋರಾಗಿ ಸುರಿದಿರುವುದರಿಂದ ಬೆಳೆ ನಾಶವಾಗಿದೆ. ಈ ಕಾರಣಕ್ಕೆ ದರ ಏರಿಕೆಯಾಗಿದೆ ಎನ್ನುತ್ತಾರೆ ಉಡುಪಿ ಸರ್ವೀಸ್ ಬಸ್ ನಿಲ್ದಾಣ ಸಮೀಪದ ತರಕಾರಿ ಮಾರಾಟಗಾರ ಆನಂದ್. ಇನ್ನೆರೆಡು ವಾರ ತರಕಾರಿಗಳಿಗೆ ಇದೇ ಬೆಲೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು.

ಈ ವರ್ಷ ತರಕಾರಿ ಬೆಲೆ ವಿಪರೀತ ಜಾಸ್ತಿಯಾಗಿದೆ. ಕೆಲವು ತರಕಾರಿಗಳ ಬೆಲೆ ಕೆ.ಜಿ.ಗೆ ₹50ರ ಗಡಿಯಿಂದ ಕೆಳಗಿಳಿಯುತ್ತಲೇ ಇಲ್ಲ. ಬೂದುಗುಂಬಳ ಮತ್ತು ಸಿಹಿಗೆಣಸಿನ ದರ ಹಲವು ತಿಂಗಳುಗಳಿಂದ ಏರುಮುಖವಾಗಿಯೇ ಇದೆ ಎಂದು ಗ್ರಾಹಕ ಚಂದ್ರಶೇಖರ್ ಹೇಳಿದರು.

ಕಳೆದ ಆರು ತಿಂಗಳುಗಳಿಂದಲೂ ಮೊಟ್ಟೆ ದರದಲ್ಲಿ ಏರಿಳಿತ ಆಗುತ್ತಲೇ ಇದೆ. ಈಗ ಮೊಟ್ಟೆ ದರ ಮತ್ತಷ್ಟು ಏರಿಕೆಯಾಗಿ ಖರೀದಿಸುವ ಗ್ರಾಹಕರ ಸಂಖ್ಯೆಯೇ ಕಡಿಮೆಯಾಗಿದೆ.
–ಫಿರೋಜ್, ವ್ಯಾಪಾರಿ ಆದಿ ಉಡುಪಿ

ಪೌಷ್ಟಿಕ ಆಹಾರವಾಗಿರುವುದರಿಂದ ಮಕ್ಕಳಿಗೆ ಹೆಚ್ಚಾಗಿ ಬೇಯಿಸಿದ ಮೊಟ್ಟೆ ನೀಡುತ್ತೇವೆ . ಇದೀಗ ದರ ವಿಪರೀತ ಏರಿಕೆಯಾಗಿರುವುದರಿಂದ ಅಪರೂಪಕ್ಕಷ್ಟೆ ಖರೀದಿಸುತ್ತೇನೆ.
–ಶ್ರೀನಿವಾಸ, ಗ್ರಾಹಕ

ಹಣ್ಣುಗಳ ಬೆಲೆಯೂ ಏರುಮುಖ

ತರಕಾರಿ ಜೊತೆಗೆ ಹಣ್ಣುಗಳ ಬೆಲೆಯೂ ಏರುಮುಖವಾಗಿಯೇ ಇದೆ.

ಏಲಕ್ಕಿ ಬಾಳೆ ಹಣ್ಣಿನ ದರ ಕೆ.ಜಿ.ಗೆ ₹80 ಇದೆ. ನೇಂದ್ರ ಬಾಳೆಹಣ್ಣಿನ ದರ ಕೆ.ಜಿ.ಗೆ ₹70 ಇದೆ. ಏಲಕ್ಕಿ ಬಾಳೆಯನ್ನು ಪೂಜೆಯ ಸಂದರ್ಭದಲ್ಲೂ ಬಳಸುವುದರಿಂದ ಇದಕ್ಕೆ ಸದಾ ಬೇಡಿಕೆ ಇರುತ್ತದೆ. ಈ ಕಾರಣಕ್ಕೆ ಇದರ ದರವು ಕೆ.ಜಿ.ಗೆ ₹70ರಿಂದ ಕೆಳಗೆ ಇಳಿಯುವುದೇ ಇಲ್ಲ.

ಸೇಬುಹಣ್ಣಿನ ದರ ಕೆ.ಜಿ.ಗೆ ₹220 ಇದೆ. ಪಪ್ಪಾಯಿ ಹಣ್ಣಿನ ದರ ಕೆಲ ತಿಂಗಳುಗಳಿಂದ ಕೆ.ಜಿ.ಗೆ ₹60ರಿಂದ ₹70 ಇದೆ. ನವೆಂಬರ್ ತಿಂಗಳ ನಂತರ ಹಣ್ಣುಗಳಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ದರ ಏರಿಕೆಯಾಗುತ್ತಲೇ ಇರುತ್ತದೆ ಎನ್ನುತ್ತಾರೆ ಹಣ್ಣಿನ ವ್ಯಾಪಾರಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.