ಕುಂದಾಪುರ: ಕೊಲ್ಲೂರಿನ ಮೂಕಾಂಬಿಕಾ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿ ಸದಸ್ಯರನ್ನು ಆಯ್ಕೆ ಮಾಡಿ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕಾರ್ಯದರ್ಶಿ, ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮದಾಯ ದತ್ತಿಗಳ ಇಲಾಖೆ ಆಯಕ್ತ ಎಂ.ವಿ. ವೆಂಕಟೇಶ್ ಶುಕ್ರವಾರ ಆದೇಶ ಹೊರಡಿಸಿದ್ದಾರೆ.

ಷರತ್ತುಗಳಿಗೆ ಒಳಪಟ್ಟು ಸಮಿತಿಯ ಅವಧಿ ಮುಂದಿನ ಮೂರು ವರ್ಷಗಳ ಅವಧಿಗೆ ಇರುತ್ತದೆ. 9 ಸದಸ್ಯರಲ್ಲಿ ಅರ್ಚಕರ ಯಾದಿಯಲ್ಲಿ ಪ್ರಧಾನ ಅರ್ಚಕ/ ಅರ್ಚಕರಿಗೆ ಮೀಸಲಿರಿಸಲಾಗಿದೆ. ಉಳಿದಂತೆ ಪರಿಶಿಷ್ಟ ಪಂಗಡದಿಂದ ಬೈಂದೂರಿನ ಕಾಲ್ತೋಡು, ಮೆಟ್ಟಿನಹೊಳೆ ಜೋಗಿಜಡ್ಡು ಗೊರಕಲ್ಲಿನ ಮಹಾಲಿಂಗ ವೆಂಕ ನಾಯ್ಕ್, ಮಹಿಳಾ ಮೀಸಲಾತಿಯಲ್ಲಿ ಯಡ್ತರೆ ಗ್ರಾಮದ ಯೋಜನ ನಗರದ ಧನಲಕ್ಷ್ಮೀ, ಪಡುವರಿ ಗ್ರಾಮದ ಕಾಜಿಮನೆ ಸುಧಾ ಕೆ, ಸಾಮಾನ್ಯ ವರ್ಗದಲ್ಲಿ ತಗ್ಗರ್ಸೆಯ ಕೆ. ಬಾಬು ಶೆಟ್ಟಿ, ಕುಂದಾಪುರ ತಾಲ್ಲೂಕು ಕೋಟೇಶ್ವರದ ಸುರೇಂದ್ರ ಶೆಟ್ಟಿ, ಉಪ್ಪಿನಕುದ್ರುವಿನ ಯು. ರಾಜೇಶ್ ಕಾರಂತ್ , ಆಲೂರು ಗ್ರಾಮದ ಗುಂಡೂರಿನ ರಘುರಾಮ ದೇವಾಡಿಗ ಮಂಗಳೂರಿನ ಅಭಿಲಾಷ್ ಪಿ.ವಿ. ಅವರನ್ನು ನೇಮಕಾತಿ ಮಾಡಿ ಆದೇಶಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.