ಪಡುಬಿದ್ರಿ: ಮುದರಂಗಡಿ ಗ್ರಾಮದ ಸಾಂತೂರಿನ ಮನೆಯೊಂದರ ಬಾವಿಗೆ ಬಿದ್ದ ಚಿರತೆಯನ್ನು ಶುಕ್ರವಾರ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಕ್ಷಿಸಿ ಅಭಯಾರಣ್ಯಕ್ಕೆ ಸ್ಥಳಾಂರಿಸಿದರು.

ಲಕ್ಕದಕಟ್ಟ ಕರುಣಾಕರ ಪೂಜಾರಿ ಮನೆ ಅಂಗಳದ ಆವರಣದಲ್ಲಿನ ಬಾವಿಗೆ 3 ವರ್ಷದ ಗಂಡು ಚಿರತೆ ಬಿದ್ದಿತ್ತು. ಕರುಣಾಕರ ಅವರು ಬೆಳಿಗ್ಗೆ ಸುಮಾರು 11.30ಕ್ಕೆ ಬಾವಿಯಿಂದ ನೀರು ಸೇದಲು ಕೊಡಪಾನ ಇಳಿಸಿದಾಗ ಚಿರತೆ ಬಿದ್ದಿರುವುದು ಕಂಡುಬಂತು. ತಕ್ಷಣ ಗ್ರಾಮ ಪಂಚಾಯಿತಿ ಸಹಿತ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.

ಮಧ್ಯಾಹ್ನ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಪರಿಶೀಲನೆ ನಡೆಸಿ ಬಾವಿಗೆ ಬೋನ್ ಇಳಿಸಿ ಚಿರತೆಯನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿದ್ದಾರೆ. ಸೆರೆ ಹಿಡಿದ ಚಿರತೆಯನ್ನು ಕೊಲ್ಲೂರು ಮೂಕಾಂಬಿಕಾ ಅಭಯಾರಣ್ಯ ಪ್ರದೇಶಕ್ಕೆ ಸ್ಥಳಾಂತರಿಸಲಾಯಿತು. ಚಿರತೆ ನೋಡಲು ನೂರಾರು ಮಂದಿ ಜಮಾಯಿಸಿದ್ದರು.

ಈ ಭಾಗದಲ್ಲಿ ಸಾಕುನಾಯಿ ಮೇಲೆ ದಾಳಿ ನಡೆಸಿದ್ದ ಚಿರತೆಯನ್ನು ಮನೆ ಮಂದಿ ಅಟ್ಟಿಸಿದ್ದರು. ಗುರುವಾರ ರಾತ್ರಿ ಮನೆ ಮಂದಿ ಸ್ಥಳೀಯ ದೇವಸ್ಥಾನದಲ್ಲಿನ ಉತ್ಸವಕ್ಕೆ ತೆರಳಿದ್ದರು. ಈ ವೇಳೆ ಬೆಕ್ಕೊಂದನ್ನು ಅಟ್ಟಿಸಿಕೊಂಡು ಬಂದು ಚಿರತೆ ಬಾವಿಗೆ ಬಿದ್ದಿರಬಹುದು ಎಂದು ಊಹಿಸಲಾಗಿದೆ. ಈ ಪ್ರದೇಶದಲ್ಲಿ ಚಿರತೆ, ಕಾಡುಕೋಣಗಳು ಪದೇ ಪದೇ ಕಾಣಿಸಿಕೊಳ್ಳುತ್ತಿದ್ದು, ಕೃಷಿ ಹಾನಿ ಮಾಡುತ್ತಿವೆ. ಜನರು ಕತ್ತಲಾದ ಬಳಿಕ ಓಡಾಡಲು ಭಯಪಡುವಂತಾಗಿದೆ ಎಂದು ಕರುಣಾಕರ್ ತಿಳಿಸಿದ್ದಾರೆ.

ಉಪ ವಲಯ ಅರಣ್ಯಾಧಿಕಾರಿ ಗುರುರಾಜ್, ವಾರಿಜ ನಾಯಿರಿ, ಅರಣ್ಯ ಪಾಲಕರಾದ ಅಖಿಲೇಶ್, ಕೇಶವ್, ಮಂಜುನಾಥ್, ಶರಣ್, ವಾಹನ ಚಾಲಕ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಗ್ರಾ.ಪಂ. ಅಧ್ಯಕ್ಷೆ ನಮಿತಾ, ಸದಸ್ಯರಾದ ರವೀಂದ್ರ ಪ್ರಭು, ಶಿವರಾಮ ಭಂಡಾರಿ, ಡೇವಿಡ್ ಡಿಸೋಜ, ಪಿಡಿಒ ಮುತ್ತು, ಲೆಕ್ಕ ಸಹಾಯಕ ಶಿವರಾಮ ಭೇಟಿ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.