ಜುಲೈ ತಿಂಗಳಲ್ಲಿ ಕೇಸರಿಯ ಬೀಜ ಹಾಕಿದ್ದೆವು. ಈಗ ಹೂವಾಗಲು ಶುರುವಾಗಿದೆ. ಈ ಬಾರಿಯ ಫಸಲು ನೋಡಿಕೊಂಡು ಬೆಳೆಯನ್ನು ವಿಸ್ತರಿಸುವ ಬಗ್ಗೆ ಚಿಂತನೆ ನಡೆಸಲಿದ್ದೇವೆ
ಅನಂತಜಿತ್ ತಂತ್ರಿ ಸಾಫ್ಟ್‌ವೇರ್ ಎಂಜಿಯರ್
‘ರಾಸಾಯನಿಕ ಬಳಸುವುದಿಲ್ಲ’
ಜುಲೈ ತಿಂಗಳಲ್ಲಿ ಕಾಶ್ಮೀರದ ರೈತರಿಂದ ಗಡ್ಡೆ ಖರೀದಿಸಿ ತಂದು ಬಿತ್ತನೆ ಮಾಡಿದ್ದೇವೆ. ಬಿತ್ತನೆ ಮಾಡಿದ ಆರಂಭದ ಒಂದು ತಿಂಗಳು ಹವಾನಿಯಂತ್ರಿತ ಕತ್ತಲು ಕೋಣೆಯಲ್ಲಿರಿಸಬೇಕಾಗುತ್ತದೆ. ಗಡ್ಡೆ ಚಿಗುರಿದ ಬಳಿಕ ಕೃತಕ ಬೆಳಕಿನ ವ್ಯವಸ್ಥೆ ಮಾಡಿದ್ದೇವೆ. ಅಕ್ಟೋಬರ್‌ನಿಂದ ಹೂವಾಗುತ್ತದೆ. ನಾವು ಯಾವುದೇ ರಾಸಾಯನಿಕ ಬಳಸುವುದಿಲ್ಲ. ಫಂಗಸ್ ಬರದಿರಲು ಕಹಿಬೇವಿನ ಎಣ್ಣೆ ಉಪಯೋಗಿಸುತ್ತೇವೆ. ಕಳೆದ ವರ್ಷ 50 ಕೆ.ಜಿ. ಗಡ್ಡೆ ಬಿತ್ತನೆ ಮಾಡಿ 37 ಗ್ರಾಂ ಕೇಸರಿ ಸಿಕ್ಕಿತ್ತು. ಕೇಸರಿ ಮಾರಾಟದಿಂದ ₹15 ಸಾವಿರ ಆದಾಯ ಬಂದಿದೆ. ಜನರೇಟರ್ ಹವಾನಿಯಂತ್ರಿತ ವ್ಯವಸ್ಥೆ ಚಿಲ್ಲರ್ ಯಂತ್ರಗಳ ಖರೀದಿ ಸೇರಿ ಕಳೆದ ವರ್ಷ ₹5 ಲಕ್ಷ ಹೂಡಿಕೆ ಮಾಡಿದ್ದೇವೆ ಎನ್ನುತ್ತಾರೆ ಅನಂತಜಿತ್ ತಂತ್ರಿ.