ಕೋಟ (ಬ್ರಹ್ಮಾವರ): ಮಕ್ಕಳ ಆಲೋಚನೆಗಳು, ಭಾವನೆಗಳು ವಿಭಿನ್ನವಾಗಿರುತ್ತವೆ. ನೂರಾರು ಕನಸುಗಳು, ಗುರಿಗಳು ಅವರ ಮನದಲ್ಲಿ ಅಡಕವಾಗಿರುತ್ತವೆ. ಅದು ಸಾಕಾರಗೊಳ್ಳಲು ಹಿರಿಯರು ಪ್ರೇರಣೆ ನೀಡಬೇಕು ಎಂದು ಕೋಟದ ನಿಸ್ವಾರ್ಥ ಸೇವಾ ಟ್ರಸ್ಟ್ ಸದಸ್ಯ ಪ್ರದೀಪ ಪೂಜಾರಿ ಹೇಳಿದರು.

ಕೋಟ ಥೀಂ ಪಾರ್ಕ್‌ನಲ್ಲಿ ಡಾ. ಶಿವರಾಮ ಕಾರಂತ ಪ್ರತಿಷ್ಠಾನ, ಉಡುಪಿಯ ಡಾ.ಶಿವರಾಮ ಕಾರಂತ ಟ್ರಸ್ಟ್, ಕೋಟತಟ್ಟು ಗ್ರಾಮ ಪಂಚಾಯಿತಿ, ಮಣೂರು ಪಡುಕೆರೆ ಗೀತಾನಂದ ಫೌಂಡೇಶನ್, ಉಸಿರು ಕೋಟ, ಅರಿವು ಕೇಂದ್ರ ಡಿಜಿಟಲ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ, ಕೋಟತಟ್ಟು ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ದಿ. ಕೆ.ಸಿ. ಕುಂದರ್ ಸ್ಮರಣಾರ್ಥವಾಗಿ ನಡೆಯುತ್ತಿರುವ 24ನೇ ವರ್ಷದ ಬೇಸಿಗೆ ಶಿಬಿರ ‘ವಿಕಸನ’ದ ಐದನೇ ದಿನದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳ ಭಾವನೆಗಳು ಸಮಾಜದ ಮುಂದೆ ಅನಾವರಣಗೊಳ್ಳಲು ಬೇಸಿಗೆ ಶಿಬಿರಗಳು ಸಹಕಾರಿಯಾಗಿವೆ ಎಂದರು.

ಶಿಬಿರದ ನಿರ್ದೇಶಕ ನರೇಂದ್ರ ಕುಮಾರ್ ಕೋಟ, ಅಧ್ಯಾಪಕ ಸತೀಶ ವಡ್ಡರ್ಸೆ, ಶಿಬಿರದ ತಂಡಗಳ ನಾಯಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.