ಕುಂದಾಪುರ: ‘ಕೇವಲ 10 ಕಿ.ಮೀ ಅಂತರದಲ್ಲಿ ಎರಡು ಕಡೆ ಹೆದ್ದಾರಿಯಲ್ಲಿ ಪ್ರಯಾಣಿಕರಿಂದ ಟೋಲ್ ವಸೂಲಿ ಮಾಡುತ್ತಿರುವುದು ಹೆದ್ದಾರಿ ದರೋಡೆಗೆ ಸಮವಾಗಿದೆ. ಕೇವಲ 6 ತಿಂಗಳ ಅವಧಿಗೆಂದು ಆರಂಭಗೊಂಡಿದ್ದ ಸುರತ್ಕಲ್ ಟೋಲ್ಗೇಟ್ ಸಾರ್ವಜನಿಕರ ಪ್ರಬಲ ವಿರೋಧದ ನಡುವೆಯೂ ಏಳು ವರ್ಷಗಳನ್ನು ಪೂರೈಸಿ ಮುಂದುವರೆಯುತ್ತಿದೆ ಎಂದು ಟೋಲ್ಗೇಟ್ ವಿರೋಧಿ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ಆರೋಪಿಸಿದರು.

ಅ.18ರಂದು ನಡೆಸಲು ಉದ್ದೇಶಿಸಿರುವ ಟೋಲ್ ಗೇಟ್ ಮುತ್ತಿಗೆ ಹೋರಾಟದ ಯಶಸ್ಸಿಗಾಗಿಇಲ್ಲಿನ ಕಾರ್ಮಿಕ ಭವನದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಹೋರಾಟ ಸಮಿತಿಯ ಮುಖಂಡ ಕೊಳ್ಕೆಬೈಲ್ ಕಿಶನ್ ಹೆಗ್ಡೆ ಮಾತನಾಡಿ, ‘ಟೋಲ್ ಗೇಟ್ ಮುತ್ತಿಗೆ ಹೋರಾಟಕ್ಕೆ ಬಸ್ ಮಾಲೀಕರ ಸಂಘವು ಬೆಂಬಲ ಕೊಡುತ್ತದೆ. ಉಡುಪಿ ಜಿಲ್ಲೆಯ ಬಡ, ಮಧ್ಯಮ ವರ್ಗದ ಹಾಗೂ ಟ್ಯಾಕ್ಸಿ ಚಾಲಕರನ್ನು ಟೋಲ್ ಗೇಟ್ ಹಿಂದಿರುವ ಶಕ್ತಿಗಳು ನಿರಂತರ ಶೋಷಣೆ ಮಾಡುತ್ತಿವೆ. ಈ ಶೋಷಣೆಯನ್ನು ಶಾಶ್ವತವಾಗಿ ಕೊನೆಗಾಣಿಸಬೇಕಾದರೆ, ಅ.18ರಂದು ನಡೆಯುವ ಮುತ್ತಿಗೆ ಕಾರ್ಯಕ್ರಮದಲ್ಲಿ ನೂರಾರು ಮಂದಿ ಜಿಲ್ಲೆಯಿಂದ ಭಾಗವಹಿಸಬೇಕು’ ಎಂದರು.

ಇಂಟಕ್ ಮುಖಂಡ ಲಕ್ಷ್ಮಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಸಿಐಟಿಯು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸುರೇಶ ಕಲ್ಲಾಗರ, ದಲಿತ ಸಂಘರ್ಷ ಸಮಿತಿ ಮುಖಂಡರಾದ ನಾಗರಾಜ, ಶ್ರೀನಿವಾಸ ಮಲ್ಯಾಡಿ, ಪ್ರಮುಖರಾದ ಚಂದ್ರಶೇಖರ.ವಿ, ರಮೇಶ್.ವಿ, ರಾಜು ದೇವಾಡಿಗ, ರವಿ ವಿ.ಎಂ, ಶ್ರೀನಾಥ ಕುಲಾಲ್, ಗಣೇಶ ಮೆಂಡನ್, ಬಾಲಕೃಷ್ಣ, ಎಂ, ವೆಂಕಟೇಶ್ ಕೋಣಿ ಇದ್ದರು.

ಈ ಸಂಬಂಧ ಪಟ್ಟಣದಲ್ಲಿ ಜಾಗೃತಿ ಜಾಥಾ ನಡೆಸಲು ತೀರ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.