ಉಡುಪಿ:ಹಾರುಬೂದಿಯಂತಹ ವಸ್ತು ನಗರದಲ್ಲಿ ಇರುವ ಬೈಕ್, ಕಾರು ಸೇರಿದಂತೆ ಬಹುತೇಕ ವಾಹನಗಳ ಮೇಲ್ಮೈನಲ್ಲಿ ಆವರಿಸಿ ಶುಕ್ರವಾರ ಕೆಲ ಕಾಲ ಸಾರ್ವಜನಿಕರನ್ನು ಆಂತಕಕ್ಕೀಡುಮಾಡಿತ್ತು.

ಮಧ್ಯಾಹ್ನ ತುಂತುರು ಮಳೆ ಬಂದ ಬಳಿಕ, ವಾಹನಗಳ ಮೇಲೆ ದೂಳಿನ ಪದರು, ಚದುರಿದ ಚುಕ್ಕೆಗಳಾಕಾರದಲ್ಲಿ ನಿರ್ಮಾಣವಾಗಿದ್ದು ಕಂಡು ಬಂತು. ವಾಹನಗಳ ಮೇಲೆ ಕಂದುಬಣ್ಣದ ದೂಳು ಕಂಡುಬಂದಿದ್ದು ನಾಗರಿಕರು ಭೀತಿಗೊಂಡರು.

ವಾಹನ ಮಾಲೀಕರು ವಾಹನಗಳ ಫೋಟೊ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದ ಪರಿಣಾಮ ವಿಚಾರ ಚರ್ಚೆ ನಡೆಯಿತು. ಹಾರು ಬೂದಿಯಂತಹ ವಸ್ತು ಬಂದಿದ್ದು ಎಲ್ಲಿಂದ, ಇದು ವಾತಾವರಣ ವೈಚಿತ್ರ್ಯವೇ, ಕಾರ್ಖಾನೆಯ ಹಾರುಬೂದಿಯೇ, ದೂಳೇ ಎಂಬ ಬಗ್ಗೆ ಚರ್ಚೆ ನಡೆಯಿತು.

ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಪ್ರತಿಕ್ರಿಯೆ ನೀಡಿಲ್ಲ. ಇದು ಹಾರು ಬೂದಿಯೋ, ದೂಳೋ ಖಚಿತವಾಗಿಲ್ಲ. ಇದ್ದಕ್ಕಿದ್ದಂತೆ ಉಂಟಾಗಿರುವ ಈ ಬಗೆಯ ದೃಶ್ಯಗಳನ್ನು ಕಂಡು ಆತಂಕ ವ್ಯಕ್ತಪಡಿಸಿದ್ದಾರೆ.

ಜಿ.ಎಂ. ಷರೀಫ್ ಹೊಡೆ ಅವರು ಫೇಸ್ಬುಕ್ನಲ್ಲಿ ಬೈಕ್ನ ಸೀಟ್ ಮೇಲೆ ದೂಳು ಇರುವ ಚಿತ್ರವೊಂದನ್ನು ಪೋಸ್ಟ್ ಮಾಡಿದ್ದು,ಇದೆಂಥದು?! ಇಂದು ಸಂಜೆ ಉಡುಪಿಯಲ್ಲಿ ನಾನು ನೋಡಿದ ಎಲ್ಲಾ ಬೈಕ್ ಮತ್ತು ಕಾರುಗಳ ಮೇಲೆ ಈ ದೃಶ್ಯ ಕಂಡು ಬಂತು. ಎಲ್ಲಾ ಕಡೆ ಹೀಗಾಗಲು ಹೇಗೆ ಸಾಧ್ಯ? ಏನಿದು? ಯಾಕಾಗಿರಬಹುದು? ಎಂದು ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.