ಅಜ್ಜರಕಾಡಿನ ಭುಜಂಗ ಪಾರ್ಕ್‌ನಲ್ಲಿ ನಡಿಗೆ ಪಥದಲ್ಲಿರುವ ತೆರೆದ ಫ್ಯೂಸ್ ಬಾಕ್ಸ್
ಅಜ್ಜರಕಾಡಿನ ಭುಜಂಗ ಪಾರ್ಕ್‌ನಲ್ಲಿರುವ ಮಕ್ಕಳ ಆಟದ ಸ್ಥಳಕ್ಕೆ ತೆರಳುವಲ್ಲಿ ಪ್ರವೇಶ ದ್ವಾರದ ಹಂಚುಗಳು ನೇತಾಡುತ್ತಿವೆ
ಭುಜಂಗ ಪಾರ್ಕ್‌ನಲ್ಲಿರುವ ಕೊಳದ ನೀರಿನಲ್ಲಿ ಪಾಚಿಗಟ್ಟಿರುವುದು
ಭುಜಂಗ ಪಾರ್ಕ್‌ನಲ್ಲಿ ಹಾನಿಗೀಡಾಗಿರುವ ನೀರಿನ ಟ್ಯಾಂಕ್
ಕೆಲವು ಉದ್ಯಾನಗಳ ಉಪಕರಣಗಳನ್ನು ಕಿಡಿಗೇಡಿಗಳು ಮುರಿದು ಹಾಕುತ್ತಿದ್ದಾರೆ. ಉದ್ಯಾನಗಳಲ್ಲಿ ಅನುಚಿತವಾಗಿ ವರ್ತನೆ ಮಾಡುವವರ ಮೇಲೆ ನಿಗಾ ಇರಿಸಲು ಹೆಚ್ಚಿನ ಕಾವಲು ಸಿಬ್ಬಂದಿಯನ್ನು ನೇಮಕ ಮಾಡಬೇಕು
ಸೋಮಶೇಖರ್ ನಾಗರಿಕ
ನಗರಸಭೆ ಅಧೀನದಲ್ಲಿರುವ ಉದ್ಯಾನಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು ಮತ್ತು ಮೇಲ್ವಿಚಾರಕರನ್ನು ನೇಮಿಸಬೇಕು
ಉಮೇಶ್ ಶೆಟ್ಟಿ ನಾಗರಿಕ
ನಗರದ ಬಹುತೇಕ ಉದ್ಯಾನಗಳಲ್ಲೂ ನಿರ್ವಹಣೆ ಕೊರತೆ ಇದೆ. ಅವುಗಳ ನಿರ್ವಹಣೆಗೆ ನಗರಸಭೆಯವರು ಹೆಚ್ಚಿನ ಒತ್ತು ನೀಡಬೇಕು. ಮೂಲಸೌಕರ್ಯ ಇಲ್ಲದ ಕಡೆ ಮೂಲ ಸೌಕರ್ಯ ಒದಗಿಸಬೇಕು. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಬದ್ಧತೆ ಪ್ರದರ್ಶಿಸಬೇಕು –ನಿತ್ಯಾನಂದ ಒಳಕಾಡು ಸಾಮಾಜಿಕ ಕಾರ್ಯಕರ್ತ ಅಜ್ಜರಕಾಡಿನ ಭುಜಂಗ ಪಾರ್ಕ್‌ನಲ್ಲಿ ಮಕ್ಕಳು ಆಟವಾಡುವಲ್ಲಿ ಅಪಾಯಕರವಾಗಿರುವ ಪ್ರವೇಶ ದ್ವಾರದ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು. ಜನರು ಕಸ ಎಸೆಯದಂತೆ ನಿಗಾ ವಹಿಸಲು ಮತ್ತು ಮೇಲ್ವಿಚಾರಣೆ ನಡೆಸಲು ಸಿಬ್ಬಂದಿಗೆ ಸೂಚಿಸಲಾಗುವುದು