ಕಾರ್ಕಳ: ಮಹಿಳೆಯರು ಕುಟುಂಬ ನಿರ್ವಹಣೆಯ ಜೊತೆಗೆ ಸ್ವಸಹಾಯ ಗುಂಪಿನ ಮೂಲಕ ಆರ್ಥಿಕವಾಗಿ ಸಬಲೀಕರಣಗೊಳ್ಳುತ್ತಿದ್ದಾರೆ. ಇದರಿಂದ ಸಹಕಾರಿ ಕ್ಷೇತ್ರಕ್ಕೆ ಹೊಸ ಚೈತನ್ಯ ಬಂದಿದೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವ ವಿ. ಸುನಿಲ್ ಕುಮಾರ್ ಹೇಳಿದರು.

ಇಲ್ಲಿನ ಬಾಹುಬಲಿ ಪ್ರವಚನ ಮಂದಿರದಲ್ಲಿ ಶುಕ್ರವಾರ ನವೋದಯ ಚಾರಿಟೇಬಲ್ ಟ್ರಸ್ಟ್‌ನ ವತಿಯಿಂದ ಸ್ವಸಹಾಯ ಗುಂಪಿನ ಸದಸ್ಯರಿಗೆ ಆಯೋಜಿಸಿದ್ದ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನಡೆಯುತ್ತಿರುವ ಸ್ವಸಹಾಯ ಗುಂಪಿನ ಸದಸ್ಯರ ಆರ್ಥಿಕ ಸಬಲೀಕರಣ ರಾಜ್ಯದ 9 ಜಿಲ್ಲೆಗಳಿಗೆ ವಿಸ್ತಾರವಾಗುತ್ತಿರುವುದು ಸಂತಸದ ವಿಚಾರ ಎಂದರು.

ಮಹಿಳೆಯರು ಸ್ವ ಉದ್ಯೋಗ ಮಾಡಲು ಹೊಲಿಗೆ ಯಂತ್ರ ವಿತರಣೆ, ಜೀವ ವಿಮೆ ಸೌಲಭ್ಯ ನೀಡುವ ಮೂಲಕ ಪ್ರತ್ಯಕ್ಷ ಪರೋಕ್ಷವಾಗಿ ಮಹಿಳೆಯರ ಸಬಲೀಕರಣ ಸಾಧ್ಯವಾಗಿದೆ. ಅಭಿವೃದ್ಧಿ ಕೇವಲ ಸರ್ಕಾರದಿಂದ ಮಾತ್ರವಲ್ಲ, ನವೋದಯ ಚಾರಿಟೇಬಲ್ ಟ್ರಸ್ಟ್‌ನಂತಹ ಸಂಘ ಸಂಸ್ಥೆಗಳಿಂದಲೂ ಸಾಧ್ಯ. ಟ್ರಸ್ಟ್‌ನ ನೇತಾರ ಎಂ.ಎನ್.ರಾಜೇಂದ್ರ ಕುಮಾರ್ ಅವರು ಲಕ್ಷಾಂತರ ಕುಟುಂಬಗಳಿಗೆ ನೀಡುತ್ತಿರುವ ನೆರವು ಇನ್ನಷ್ಟು ವಿಸ್ತಾರವಾಗಬೇಕು. ಕಾರ್ಕಳದ ಅಭಿವೃದ್ಧಿಯಲ್ಲಿ ಎಂಎನ್‌ಆರ್ ನೆರವು ಮರೆಯುವಂತಿಲ್ಲ ಎಂದರು.

ನವೋದಯ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಮಾತನಾಡಿ ಮಹಿಳಾ ನವೋದಯ ಸ್ವಸಹಾಯ ಗುಂಪುಗಳು ಆರಂಭಗೊಂಡು 25 ವರ್ಷಗಳು ಕಳೆದಿದ್ದು ಮಹತ್ತರ ಬದಲಾವಣೆಗಳಾಗಿವೆ. ನಾರಿ ಶಕ್ತಿಯ ಎದುರು ಮತ್ತೊಂದು ಶಕ್ತಿಯಿಲ್ಲ ಎನ್ನುವಂತಾಗಿದೆ ಎಂದರು.

ಕಾರ್ಕಳ ವಿಧಾನ ಸಭಾ ಕ್ಷೇತ್ರ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವರಿಂದ ಹಿಡಿದು ಸುನಿಲ್ ಕುಮಾರ್ ಆದಿಯಾಗಿ ಎಲ್ಲರಿಂದಲೂ ಬಹಳಷ್ಟು ಅಭಿವೃದ್ಧಿ ಕಂಡಿದೆ. ಸಚಿವ ಸುನಿಲ್ ಕುಮರ್ ಅವರ ನೇತೃತ್ವದಲ್ಲಿ ನಡೆದ ಕಾರ್ಕಳ ಉತ್ಸವ, ಪರಶುರಾಮ ಥೀಂ ಪಾರ್ಕ್ ಲೋಕಾರ್ಪಣೆ ಕಾರ್ಕಳಕ್ಕೆ ಹೊಸ ಇತಿಹಾಸ ನಿರ್ಮಿಸಿಕೊಟ್ಟಿವೆ ಎಂದರು.

ಈ ಸಂದರ್ಭ 9 ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು. ಅಪಘಾತಗೊಂಡ ಎರಡು ಕುಟುಂಬಗಳಿಗೆ ತಲಾ 1 ಲಕ್ಷ ನೆರವು ಹಾಗೂ ಸಾಣೂರು ವ್ಯವಸಾಯ ಸಂಘದ ಕಟ್ಟಡಕ್ಕೆ 5 ಲಕ್ಷ ಸಹಾಯಧನ ವಿತರಿಸಲಾಯಿತು. ಮಹಾಲಕ್ಷ್ಮೀ ನವೋದಯ ಸ್ವಸಹಾಯ ಸಂಘಕ್ಕೆ ಚಾಲನೆ ನೀಡಲಾಯಿತು.

ನವೋದಯದ ದುರ್ಗಾಪರಮೇಶ್ವರಿ ಗುಂಪಿನ ಸದಸ್ಯೆ ಶುಭಾ ಕುಟುಂಬ ಪ್ರಗತಿ ಸಾಧನೆಯ ಬಗ್ಗೆ ತಿಳಿಸಿದರು. ಟ್ರಸ್ಟಿಗಳಾದ ಇರ್ವತ್ತೂರು ಭಾಸ್ಕರ ಎಸ್ ಕೋಟ್ಯಾನ್, ಮುಂಡ್ಕೂರು ವಾದಿರಾಜ್ ಶೆಟ್ಟಿ, ಜಲದುಗಾ ಸಹಕಾರಿ ಬ್ಯಾಂಕಿನ ರಾಘವ ಹೆಗ್ಡೆ, ಸಾಣೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಅಲೆಕ್ಸ್ ಡಿಸೋಜಾ ಉಪಸ್ಥಿತರಿದ್ದರು.

ಶಿಕ್ಷಕ ರಾಜೇಂದ್ರ ಭಟ್ ಕಾರ್ಯಕ್ರಮ ನಿರೂಪಿಸಿದರು. ಚಾರಿಟೇಬಲ್ ಟ್ರಸ್ಟ್‌ನ ಕಾರ್ಯನಿರ್ವಹಣಾಧಿಕಾರಿ ಪೂರ್ಣಿಮಾ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.