‘ಮಹಿಳೆಯರು ಮಕ್ಕಳಿಗೆ ಇಲ್ಲ ರಕ್ಷಣೆ’
ಎಚ್‌ಐವಿ ಹಾಗೂ ಕ್ಷಯ ಸೋಂಕಿತ ನಿರ್ಗತಿಕ ಮಾನಸಿಕ ಅಸ್ವಸ್ಥ ಮಹಿಳೆಯರು ಬೀದಿಯಲ್ಲಿ ಅಲೆಯುತ್ತಿದ್ದರೂ ರಕ್ಷಣೆ ಮಾಡುವ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡುವ ಕೆಲಸ ಸಂಬಂಧಪಟ್ಟ ಇಲಾಖೆಗಳಿಂದ ನಡೆಯುತ್ತಿಲ್ಲ. ಪರಿಣಾಮ ಎಚ್‌ಐವಿ ಹಾಗೂ ಕ್ಷಯ ಸೋಂಕು ಹರಡುವ ಆತಂಕ ಎದುರಾಗಿದೆ. ಸೂಕ್ತ ರಕ್ಷಣೆ ಇಲ್ಲದೆ ಅಸಹಾಯಕ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿವೆ. ಮಹಿಳೆಯರಿಗೆ ಮಕ್ಕಳಿಗೆ ವೃದ್ಧರಿಗೆ ರಕ್ಷಣೆ ನೀಡುವಲ್ಲಿ ವಿಫಲವಾಗಿರುವ ಸರ್ಕಾರ ತೋರ್ಪಡಿಕೆಗಾಗಿ ಮಹಿಳಾ ದಿನಾಚರಣೆ ಹಿರಿಯ ನಾಗರಿಕರ ದಿನಾಚರಣೆ ಮಕ್ಕಳ ದಿನಾಚರಣೆ ವೃದ್ಧರ ದಿನಾಚರಣೆ ಆಚರಿಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ವಿಶುಶೆಟ್ಟಿ ಅಂಬಲಪಾಡಿ ಬೇಸರ ವ್ಯಕ್ತಪಡಿಸಿದರು.