ಬೈಂದೂರು: ಬೈಂದೂರಿನ ಸಾಂಸ್ಕೃತಿಕ, ಸಾಹಿತ್ಯಕ, ಸೇವಾ ಪ್ರತಿಷ್ಠಾನ ‘ಸುರಭಿ’ಯ ಆಶ್ರಯದಲ್ಲಿ ಡಿ. 27 ಮತ್ತು 28ರಂದು ಕವಿ ಮೊಗೇರಿ ಗೋಪಾಲಕೃಷ್ಣ ಅಡಿಗ ಅವರ ಸಂಸ್ಮರಣಾರ್ಥ ಅಡಿಗ ಸಮಗ್ರ ಸಾಹಿತ್ಯದ ಸಿಂಹಾವಲೋಕನದ ‘ಅಡಿಗ ಸಾಹಿತ್ಯೋತ್ಸವ’ ಹಮ್ಮಿಕೊಳ್ಳಲಾಗಿದೆ.

ಅಡಿಗರು ಮಾಧ್ಯಮಿಕ ಶಿಕ್ಷಣ ಪಡೆದ ಬೈಂದೂರು ಬೋರ್ಡ್ ಮಿಡ್ಲ್ ಸ್ಕೂಲ್ (ಈಗ ಸರ್ಕಾರಿ ಪದವಿಪೂರ್ವ ಕಾಲೇಜು)ನಲ್ಲಿ ಬೆಳಿಗ್ಗೆ 10ಗಂಟೆಯಿಂದ ಸಂಜೆ 6ರ ತನಕ ನಡೆಯಲಿರುವ ಸಾಹಿತ್ಯೋತ್ಸವದಲ್ಲಿ ವಿದ್ವಾಂಸರು ಅಡಿಗರ ಕಾವ್ಯ ಮತ್ತು ಗದ್ಯ ಸಾಹಿತ್ಯದ ವಿವಿಧ ಮುಖಗಳನ್ನು ತೆರೆದಿಡಲಿದ್ದಾರೆ.

27ರಂದು ಕನ್ನಡ ಸಾಹಿತ್ಯ ಪರಿಷತ್ತಿನ ಪೂರ್ವಾಧ್ಯಕ್ಷ ಹರಿಕೃಷ್ಣ ಪುನರೂರು ಉತ್ಸವವನ್ನು ಉದ್ಘಾಟಿಸುವರು. ಕವಿ ಡಾ ಕೆ. ಎಸ್. ನಿಸಾರ್ ಅಹಮದ್ ಈ ಸಾಹಿತ್ಯೋತ್ಸವದ ಸರ್ವಾಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ಉಡುಪಿಯ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸಂಶೋಧನಾ ಕೇಂದ್ರದ ಅಧ್ಯಕ್ಷ ಪ್ರೊ. ಹೇರಂಜೆ ಕೃಷ್ಣ ಭಟ್ ಮುಖ್ಯ ಅತಿಥಿಗಳಾಗಿ ಬರಲಿದ್ದಾರೆ.

ಒಂದನೇ ಗೋಷ್ಠಿಯಲ್ಲಿ ‘ಅಡಿಗರ ನವ್ಯಪೂರ್ವ ಕವನಗಳು’ ಕುರಿತು ಡಾ. ಧನಂಜಯ ಕುಂಬ್ಳೆ ಮತ್ತು ಡಾ. ಮಹಾಲಿಂಗ ಭಟ್ ಉಪನ್ಯಾಸ ನೀಡಲಿದ್ದು, ಡಾ. ರವಿರಾಜ ಶೆಟ್ಟಿ ಮತ್ತು ಡಾ. ಸಯ್ಯದ್ ಜಮೀರುಲ್ಲಾ ಷರೀಫ್ ಚರ್ಚೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಮಧ್ಯಾಹ್ನ 2ಕ್ಕೆ ನಡೆಯುವ ಎರಡನೆಯ ಗೋಷ್ಠಿ ‘ಅಡಿಗರ ನವ್ಯ ಕವನಗಳು’ ಕುರಿತು ಡಾ. ವಸಂತಕುಮಾರ ಪೆರ್ಲ ಮತ್ತು ಡಾ. ಸತ್ಯನಾರಾಯಣ ಮಲ್ಲಿಪಟ್ಟಣ ಅವರ ಉಪನ್ಯಾಸ ನೀಡಲಿದ್ದು, ಯು. ಚಂದ್ರಶೇಖರ ಹೊಳ್ಳ ಮತ್ತು ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಚರ್ಚೆ ನಡೆಸಲಿದ್ದಾರೆ. ಸಂಜೆ 4ರಿಂದ ಎಚ್. ಚಂದ್ರಶೇಖರ ಕೆದಿಲಾಯ ಮತ್ತು ತಂಡದಿಂದ ಅಡಿಗರ ಭಾವಗೀತೆಗಳ ಗಾಯನ ಪ್ರಸ್ತುತಗೊಳ್ಳುತ್ತದೆ.

28ರ ಬೆಳಿಗ್ಗೆ ಜಯಂತ ಕಾಯ್ಕಿಣಿ ‘ಸಾಕ್ಷಿ’ಯ ಅಡಿಗರ ಕುರಿತು ಉಪನ್ಯಾಸ ಮಾಡುವರು. 10.30ರಿಂದ ನಡೆಯುವ ಮೂರನೆಯ ಗೋಷ್ಠಿಯಲ್ಲಿ ಡಾ. ಶುಭಾ ಮರವಂತೆ ‘ಅಡಿಗರ ಗದ್ಯ ಸಾಹಿತ್ಯ’ ಕುರಿತು, ಡಾ. ಅರುಣಕುಮಾರ್ ಅವರ ‘ವಿಮರ್ಶಾಸೂತ್ರಗಳ ಒಲವು–ನಿಲುವು’ ಕುರಿತು ಮತ್ತು ಡಾ. ವಿಶ್ವನಾಥ ಬದಿಕಾನ ‘ಅಡಿಗರ ಅನುವಾದಿತ ಕೃತಿಗಳು’ ಕುರಿತು ಉಪನ್ಯಾಸ ನೀಡಲಿದ್ದಾರೆ. ಡಾ. ರಾಧಾಕೃಷ್ಣ ಬೆಳ್ಳೂರು ಮತ್ತು ಡಾ. ಪಾರ್ವತಿ ಜಿ. ಐತಾಳ್ ಚರ್ಚೆ ನಡೆಸಲಿದ್ದಾರೆ. ಡಾ. ನಾ. ದಾಮೋದರ ಶೆಟ್ಟಿ, ಡಾ. ವಸಂತಕುಮಾರ ಪೆರ್ಲ, ಡಾ. ಪಾರ್ವತಿ ಜಿ. ಐತಾಳ್, ಡಾ. ಪ್ರಶಾಂತ ನಾಯಕ್, ಡಾ. ಧನಂಜಯ ಕುಂಬ್ಳೆ, ಡಾ. ಸುಬ್ರಹ್ಮಣ್ಯ ಭಟ್ ಮತ್ತು ಪೂರ್ಣಿಮಾ ಸುರೇಶ್ ಅಡಿಗರ ಕವಿತೆಗಳನ್ನು ವಾಚಿಸುವರು. ಮೂರ್ತಿ ಬೈಂದೂರು ತಂಡದಿಂದ ಅಡಿಗರ ಭಾವಗೀತೆಗಳ ಗಾಯನ ನಡೆಯುವುದು.
ಸಂಜೆ 4.45ಕ್ಕೆ ಸಮಾರೋಪ ನಡೆಯಲಿದ್ದು, ಪ್ರೊ. ಮುರಳೀಧರ ಉಪಾಧ್ಯರ ಅಧ್ಯಕ್ಷತೆಯಲ್ಲಿ ಡಾ. ಬಿ. ಎ. ವಿವೇಕ ರೈ ಸಮಾರೋಪ ಭಾಷಣ ಮಾಡುವರು. ಮೊಗೇರಿ ಕುಟುಂಬದ ಪ್ರತಿನಿಧಿ ಜಯರಾಮ ಅಡಿಗರನ್ನು ಸನ್ಮಾನಿಸಲಾಗುವುದು. ಮಂಗಳೂರು ವಿ.ವಿ. ಕುಲಪತಿ ಡಾ. ಕೆ. ಭೈರಪ್ಪ ಅವರ ಅಧ್ಯಕ್ಷತೆಯಲ್ಲಿ ಸರ್ವಾಧ್ಯಕ್ಷ ನಿಸಾರ್ ಅಹಮದ್ ಭಾಷಣ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.