ಕಾರ್ಕಳ: ನಗರದಲ್ಲಿ ಮುಸ್ಲಿಂ ಧರ್ಮೀಯರ ಪವಿತ್ರ ಹಬ್ಬ ಈದ್ ಉಲ್ ಫಿತ್ರ್ ಅನ್ನು ಸಂಭ್ರಮದಿಂದ ಆಚರಿಸಲಾಯಿತು.

ಸಾಲ್ಮರದ ಈದ್ಗಾ ಮೈದಾನದಲ್ಲಿ ಸಾವಿರಾರು ಮಂದಿ ಮುಸ್ಲಿಮರು ಜಾಮಿಯಾ ಮಸೀದಿಯ ಗುರು ಮೌಲಾನ ಝಹೀರ್ ಅಹ್ಮದ್ ಖಾಸಿಮಿ ಅವರ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಜುಮ್ಮಾ ಮಸೀದಿಯ ಧರ್ಮಗುರು ಝಹೀರ್ ಅಹ್ಮದ್ ಖಾಸ್ಮಿ, ‘ಎಲ್ಲರಿಗೂ ಫಿತ್ರ್ ಜಕಾತ್ ಕಡ್ಡಾಯವಾಗಿದೆ. ದಾನವನ್ನು ಯಾರಿಗೆ ಬೇಕಾದರೂ ನೀಡಬಹುದು’ ಎಂದರು.

ಜಮಾತ್ ಅಧ್ಯಕ್ಷ ಜನಾಬ್ ಅಶ್ಫಾಕ್ ಅಹ್ಮದ್ ಮಾತನಾಡಿ, ‘ದೇಶದಲ್ಲಿ ಜನರು ಶಾಂತಿ ಹಾಗೂ ನೆಮ್ಮದಿಯಿಂದ ಬಾಳಬೇಕು. ದೇಶದ ಭದ್ರತೆಗೆ, ಅಖಂಡತೆಗೆ ಯಾವುದೇ ಧಕ್ಕೆ ಬರದಂತೆ ನೋಡಿಕೊಳ್ಳುವುದೇ ಹಬ್ಬದ ಸಂದೇಶ’ ಎಂದರು.

ನಮಾಜ್ ನೆರವೇರಿಸಲು ದೂರ ದೂರದಿಂದ ಆಗಮಿಸಿದ ಸಹಸ್ರಾರು ಮಂದಿ ಭಕ್ತಾದಿಗಳು ಈದ್ಗಾದಲ್ಲಿ ಜಮಾಯಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.