ಉಡುಪಿ: `ಮಾನವ ಜೀವನದ ಸಾರ್ಥಕ್ಯಕ್ಕೆ ಅಗತ್ಯವಾದ ದಮನ, ದಯೆ, ದತ್ತ ಎಂಬ ಮೂರು ಗುಣಗಳನ್ನು ಸಾರುವ ಮಹಾಭಾರತದ ಸಂದೇಶವು ಸಾರ್ವಕಾಲಿಕ' ಎಂದು ಹಿರಿಯ ಸಂಸ್ಕೃತ ವಿದ್ವಾಂಸ ಗಂಗಾಧರ ಭಟ್ ಹೇಳಿದರು.

ಎರ್ಮಾಳುಬೀಡು ದಿ. ಶಾಂತರಾಜ ಅರಸು ಮಾರಮ್ಮ ಹೆಗ್ಗಡೆಯವರ ಧರ್ಮಪತ್ನಿ ದಿ.ನಾಗವೇಣಿ ಅಮ್ಮ ಇವರ ಸ್ಮರಣಾರ್ಥ ಉಡುಪಿಯ ಪೂರ್ಣಪ್ರಜ್ಞ ಪದವಿ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ದತ್ತಿ ಉಪನ್ಯಾಸ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.

ಭಾರತ ದೇಶದ ಸುಮಾರು 18 ಭಾಷೆಗಳ ರಾಜ್ಯ ಗ್ರಂಥವು ಮಹಾ ಭಾರತವನ್ನೇ ಆಧರಿಸಿದೆ. ಎಳೆಯರಿಂದ ಹಿಡಿದು ಹಿರಿಯರವರೆಗೂ ಜೀವನಕ್ಕೆ ಅಗತ್ಯವಾದ ಮೌಲ್ಯಗಳು ಗ್ರಂಥದಲ್ಲಿದೆ.

ಮಹಾಭಾರತವು ಕಾಂತಾ ಸಂಮಿತದಂತೆ ನಮಗೆ ಹಿತವನ್ನು ಬೋಧಿ ಸುತ್ತದೆ. ಆರಂಭದಲ್ಲಿ ಸುಯೋಧನ ಎಂದು ಕರೆಸಿಕೊಂಡ ಕೌರವನು ದುರ್ಯೋಧನನಾದಾಗ ಆಗುವ ಆಪ ತ್ತನ್ನು ಮಹಾಭಾರತದಲ್ಲಿ ಕಾಣಬ ಹುದು ಎಂದರು.
ಏಕಲವ್ಯನಂತಹ ಎಳೆಯ ಸಾಧಕರನ್ನು ಪರಿಚಯಿಸಿದ ಮಹಾಭಾರತವು ಆ ಕಾಲದಲ್ಲೆೀ ಅಂಚೆ ಮತ್ತು ತೆರಪಿನ ಶಿಕ್ಷಣದ ಪರಿಕಲ್ಪನೆಗೆ ಪುಷ್ಟಿ ನೀಡಿದೆ ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಕೆ.ಸದಾಶಿವ ರಾವ್ ಅಧ್ಯಕ್ಷತೆ ವಹಿಸಿದ್ದರು. ದತ್ತಿನಿಧಿಯ ಪ್ರಾಯೋಜಕ ಎರ್ಮಾಳು ಸುರಾಜ್ ಉಪಸ್ಥಿತರಿದ್ದರು.

ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ.ಟಿ.ಎಸ್. ರಮೇಶ್ ಸ್ವಾಗತಿಸಿದರು. ಗಣಿತ ವಿಭಾಗದ ಮುಖ್ಯಸ್ಥ ರಾಘವೇಂದ್ರ ವಂದಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ.ಶ್ರೀಕಾಂತ್ ಸಿದ್ದಾಪುರ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.