ಉಡುಪಿ: ‘ಪ್ರತಿಭಾವಂತ ಲೇಖಕನ ಬರಹಕ್ಕೆ ಎಂದೂ ಸಾವಿಲ್ಲ. ಅವನ ಬರಹ ಕನ್ನಡ ಸಾಹಿತ್ಯ ಲೋಕದಲ್ಲಿ ನಿರಂತರ ವಾಗಿ ನೆಲೆಯೂರುತ್ತದೆ’ ಎಂದು ಲೇಖಕ ಎಸ್.ಆರ್. ವಿಜಯ ಶಂಕರ್ ಹೇಳಿದರು.

ಉಡುಪಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಪ್ರಾದೇಶಿಕ ಜಾನ ಪದ ರಂಗಕಲೆಗಳ ಅಧ್ಯಯನ ಕೇಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಗರದ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಶನಿವಾರ ನಡೆದ ಪೇಜಾವರ ಸದಾಶಿವ ರಾವ್ ಸಂಸ್ಮರಣೆ ಹಾಗೂ ಪುಸ್ತಕಗಳ ಬಿಡುಗಡೆ ಸಮಾ ರಂಭದಲ್ಲಿ ಅವರು ಮಾತನಾಡಿದರು.

ಸದಾಶಿವ ರಾಯರು ಕೇವಲ ಕವಿ ಯಲ್ಲ. ಅವರು ಕನ್ನಡ ಸಾಹಿತ್ಯದ ಸಮೃದ್ಧಿ. ಕತ್ತಲೆಯನ್ನು ಗುರುತಿಸುವುದು ಮತ್ತು ನಿರಾಕರಿಸುವುದು ಬೇರೆ ಬೇರೆ ತತ್ವಗಳಾ ದರೂ, ಕತ್ತಲೆಗೂ ಶಕ್ತಿ ಇದೆ ಎಂಬುವು ದನ್ನು ರಾಯರು ಗುರುತಿಸಿದ್ದಾರೆ. ನಮ್ಮ ತಿಳಿವಳಿಕೆಯನ್ನು ಹೆಚ್ಚಿಸಲು ಸಾಹಿತ್ಯ ಸಹಕಾರಿಯಾಗಿದೆ ಎಂಬ ಸಂದೇಶವನ್ನು ನೀಡಿದ ರಾಯರು, ಕನ್ನಡ ಸಾಹಿತ್ಯ ಪರಂಪರೆಗೆ ಹೊಸ ಮೆರುಗನ್ನು ನೀಡಿ ದ್ದಾರೆ. ಅವರ ಆಧುನಿಕ ವಿಚಾರ ಧಾರೆಗಳು, ಬರಹಗಳು ಇನ್ನೂ ನೂರು ವರ್ಷಗಳ ಕಾಲ ಕನ್ನಡ ಸಾಹಿತ್ಯದ ಭಾಗವಾಗಿ ಉಳಿಯುತ್ತದೆ ಎಂದರು.

ಪ್ರಾಧ್ಯಾಪಕ ಡಾ. ಗಣನಾಥ ಎಕ್ಕಾರು ಕೃತಿ ಪರಿಚಯಿಸಿದರು. ಡಾ. ಸಿ.ಆರ್. ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದರು. ಕೃತಿಗಳ ಸಂಪಾದಕರಾದ ಪ್ರೊ. ಎ.ವಿ. ನಾವಡ, ಡಾ. ಗಾಯತ್ರಿ ನಾವಡ, ಜ್ಯೋತಿ ಚೇಳ್ಯಾರು ಮತ್ತು ಪೇಜಾವರ ಪ್ರಭಾಕರ ರಾವ್ ಕಟೀಲು ಉಪಸ್ಥಿತರಿದ್ದರು. ರಾಷ್ಟ್ರಕವಿ ಗೋವಿಂದ ಪೈ ಸಂಶೋ ಧನ ಕೇಂದ್ರದ ನಿರ್ದೇಶಕ ಪ್ರೊ. ಹೆರಂಜೆ ಕೃಷ್ಣ ಭಟ್ ಸ್ವಾಗತಿಸಿದರು.
ಬಿ.ಕೆ. ಕಾರಂತ ಮತ್ತು ದೀಪಿಕಾ ಬಲ್ಲಾಳ್ ಅವರು ಪೇಜಾವರ ಅವರ ಕಾವ್ಯ ಗಾಯನ ಮಾಡಿದರು.

ತಾಳೆಗರಿಗಳ ಗ್ರಂಥ ಸಂಪಾದನೆ ಗ್ರಂಥ ಸಂಪಾದನೆ ಎಂಬುದು ತಪ್ಪು ಕಲ್ಪನೆ. ಚದುರಿ ಹೋಗಿರುವ ಲೇಖನಗಳನ್ನು ಸಂಗ್ರಹಿಸುವುದು ಕೂಡ ಗ್ರಂಥ ಸಂಪಾದನೆಯೇ ಆಗಿದೆ.
-ಎಸ್.ಆರ್. ವಿಜಯ ಶಂಕರ್,
ಲೇಖಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.