ಶಿಥಿಲಗೊಂಡ ಕಟ್ಟಡದಲ್ಲಿ ಮಕ್ಕಳನ್ನು ಕೂರಿಸುವುದಿಲ್ಲ. ಅಂತಹ ಕಟ್ಟಡದ ಬದಲು ಪರ್ಯಾಯ ವ್ಯವಸ್ಥೆಗೆ ಆದ್ಯತೆ ನೀಡಲಾಗುತ್ತಿದೆ. ಮಕ್ಕಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತದೆ.
ಹುಲಿಗೆಮ್ಮ ಕುಕನೂರ, ಉಪನಿರ್ದೇಶಕಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ- ಪುಟ್ಟ ಮಕ್ಕಳು ಕಲಿಯುವ ಕಟ್ಟಡಗಳು ಭದ್ರವಾಗಿರಬೇಕು ಸೌಲಭ್ಯ ಹೊಂದಿರಬೇಕು. ಹಾಗಿದ್ದರೆ ಪಾಲಕರಿಗೂ ಆತಂಕ ಇರುವುದಿಲ್ಲ.
ಸುಧಾ ನಾಯ್ಕ ಶಿರಸಿ, ಪಾಲಕಿಸಹಾಯಕಿ ಹೆರಿಗೆ ರಜೆಯ ಮೇಲಿದ್ದಾಗ ನಾನೇ ಎಲ್ಲ ಕೆಲಸ ನಿರ್ವಹಿಸಬೇಕಾಯಿತು. ಚುನಾವಣೆ ಜನಗಣತಿ ಮನೆ ಮನೆ ಸರ್ವೆ ಹೀಗೆ ಉಳಿದ ಕೆಲಸಗಳ ಒತ್ತಡವೂ ಹೆಚ್ಚುತ್ತಿದೆ. ಎಷ್ಟೇ ಕೆಲಸ ಮಾಡಿದರೂ ಬರುವ ಸಂಬಳ ಮಾತ್ರ ನಾಲ್ಕಂಕಿ ದಾಟುವುದಿಲ್ಲ.
ಹೊನ್ನಾವರ ತಾಲ್ಲೂಕಿನ ಅಂಗನವಾಡಿ ಕಾರ್ಯಕರ್ತೆಅಂಗನವಾಡಿಯಲ್ಲಿ ಒಮ್ಮೆ ಮಕ್ಕಳಿಗೆ ಕೊಳೆತ ಮೊಟ್ಟೆ ನೀಡಲಾಗಿತ್ತು. ಇದರಿಂದ ಮಕ್ಕಳು ಅಸ್ವಸ್ಥಗೊಳ್ಳಬೇಕಾಗಿ ಬಂದಿತ್ತು.
ಕವಿತಾ ನಾಯ್ಕ ಕೇಣಿ ಪಾಲಕಿಕಾರವಾರದ ಬೈತಕೋಲದ ಅಂಗನವಾಡಿ ಕೇಂದ್ರದಲ್ಲಿ ನೆಲ ಒಸರುವ ಪರಿಣಾಮ ಮಕ್ಕಳಿಗೆ ಬೆಚ್ಚಗೆ ಕೂರಿಸಲು ಬೆಂಚಿನ ಮೇಲೆ ಚಾಪೆ ಹಾಸಿರುವುದು
ಮುಂಡಗೋಡ ತಾಲ್ಲೂಕಿನ ಕುಂದರಗಿಯ ಅಂಗನವಾಡಿ ಕೇಂದ್ರದ ಸನಿಹವೇ ಕೆರೆಯ ನೀರು ಬಂದಿರುವುದು
ನಿರ್ಮಿತಿ ಕೇಂದ್ರದ ವತಿಯಿಂದ ಜೊಯಿಡಾ ತಾಲ್ಲೂಕಿನ ರಾಮನಗರ ಹನುಮಾನ ಗಲ್ಲಿಯಲ್ಲಿ ನಿರ್ಮಿಸಿರುವ ಅಂಗನವಾಡಿ ಕೇಂದ್ರ ಸೋರುತ್ತಿರುವುದು
ಅಂಕೋಲಾ ತಾಲ್ಲೂಕಿನ ಶಿರಕುಳಿ ಗ್ರಾಮದಲ್ಲಿರುವ ಅಂಗನವಾಡಿ ಕಟ್ಟಡ ಶಿಥಿಲ ಸ್ಥಿತಿಯಲ್ಲಿರುವುದು