ಸಂಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಎಚ್.ಡಿ ಕುಮಾರಸ್ವಾಮಿ ಇಂದು ಬಜೆಟ್ ಮಂಡಿಸಿದ್ದು ಬಜೆಟ್ಗೆ ಉತ್ತರ ಕರ್ನಾಟಕದಮಂದಿ ಪ್ರತಿಕ್ರಿಯಿಸಿದ್ದಾರೆ.

‘ಕಸರತ್ತಿನಿಂದ ತಾತ್ಕಾಲಿಕ ಖುಷಿ’

ಶಿರಸಿ: ಆರ್ಥಿಕ ಪರಿಸ್ಥಿತಿ ಮುಚ್ಚಿಟ್ಟು, ಬಜೆಟ್ನಲ್ಲಿ ಮಾಡಿದ ಕಸರತ್ತು ತಾತ್ಕಾಲಿಕ ಖುಷಿಗೆ ಕಾರಣವಾಗಬಹುದಾದರೂ ಪರಿಣಾಮ ಸಕಾರಾತ್ಮಕವಾಗಿರಲು ಸಾಧ್ಯವಿಲ್ಲ. ಚುನಾವಣಾ ಪ್ರಣಾಳಿಕೆಯನ್ನು ಅನುಷ್ಠಾನಕ್ಕೆ ತರುವ ಕಷ್ಟ ಈಗ ಗೋಚರವಾಗುತ್ತಿದೆ. ಸೌಲಭ್ಯದ ಬಹುಪಾಲು ಅಪಾತ್ರರಿಗೆ ದಕ್ಕಿಬಿಡುವ ಅಪಾಯವನ್ನು ತಪ್ಪಿಸುವ ನಿಟ್ಟಿನಲ್ಲಿ ಸಾಲ ಮನ್ನಾದಂತಹ ಗೊಂದಲದ ವಿಷಯಕ್ಕೆ ಕೈ ಹಾಕುವ ಮುನ್ನ ಸಾಕಷ್ಟು ಅಭ್ಯಾಸದ ಅವಶ್ಯಕತೆಯಿದೆ ಎಂಬುದು ಈ ಬಜೆಟ್ನಲ್ಲಿ ಮೇಲ್ನೋಟಕ್ಕೇ ಅನಿಸುತ್ತದೆ.
–ವಿ.ಪಿ. ಹೆಗಡೆ ವೈಶಾಲಿ, ಸಾಮಾಜಿಕ ಕಾರ್ಯಕರ್ತ

‘ಜಿಲ್ಲೆಗೆ ನೀರಸ ಬಜೆಟ್’

ಶಿರಸಿ: ಉತ್ತರ ಕನ್ನಡಕ್ಕೆ ಇದು ನೀರಸ ಬಜೆಟ್. ರೈತರ ಸಾಲ ಮನ್ನಾದಿಂದ ಆಗುವ ಕೊರತೆಯನ್ನು ತುಂಬಿಕೊಳ್ಳಲು ಮಾಡಿರುವ ಕಸರತ್ತು ಇದಾಗಿದೆ. ಉದಾಹರಣೆಗೆ ಪ್ಲಾಸ್ಟಿಕ್, ವಾಹನಗಳ ಮೇಲೆ ತೆರಿಗೆ. ಇದು ಪ್ರಾದೇಶಿಕ ಬಜೆಟ್ನಂತೆ ಇದೆ. ಕೆಲವೇ ಪ್ರದೇಶಗಳಿಗೆ ಸೀಮಿತವಾಗಿ ಯೋಜನೆ ಘೋಷಿಸಲಾಗಿದೆ. ಬಜೆಟ್ನಲ್ಲಿ ಯಾವುದೇ ಹೊಸ ಯೋಜನೆ ಪ್ರಕಟಗೊಂಡಿಲ್ಲ
– ಡಾ. ರವಿಕಿರಣ ಪಟವರ್ಧನ, ವೈದ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.