ಕಾರವಾರ: ಭಾರತೀಯ ನೌಕಾಪಡೆಯ ಯುದ್ಧ ವಿಮಾನ ವಾಹಕ ನೌಕೆ 'ಐಎನ್ಎಸ್ ವಿಕ್ರಮಾದಿತ್ಯ'ದ ಏಳನೇ ಕಮಾಂಡಿಂಗ್ ಆಫೀಸರ್ ಆಗಿ ಕ್ಯಾಪ್ಟನ್ ಸುಶೀಲ್ ಮೆನನ್ ಶನಿವಾರ ಅಧಿಕಾರ ಸ್ವೀಕರಿಸಿದರು. ಈ ಮೊದಲು ಕ್ಯಾಪ್ಟನ್ ಸಿ.ಆರ್.ಪ್ರವೀಣ ನಾಯರ್ ನೇತೃತ್ವ ವಹಿಸಿಕೊಂಡಿದ್ದರು.

ಸುಶೀಲ್ ಮೆನನ್ ಅವರು ಭಾರತೀಯ ಡಿಫೆನ್ಸ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದು, ನೌಕಾಪಡೆಯಲ್ಲಿ ವಿವಿಧ ಹುದ್ದೆಗಳ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ.

ಬಂದೂಕು ತರಬೇತಿ ಸಂಸ್ಥೆ 'ದ್ರೋಣಾಚಾರ್ಯ'ದಲ್ಲಿ ಅವರು 'ಅತ್ಯುತ್ತಮ ಸರ್ವಾಂಗೀಣ ಅಧಿಕಾರಿ' ಎಂಬ ಹೆಗ್ಗಳಿಕೆಗೂ ಭಾಜನರಾಗಿದ್ದಾರೆ. ಐ.ಎನ್.ಎಸ್ ಕಾಕಿನಾಡದಲ್ಲಿ ನೌಕಾಪಡೆಗೆ ಸೇರ್ಪಡೆಯಾದ ಅವರು, ಬೃಹತ್ ಯುದ್ಧ ಟ್ಯಾಂಕ್ 'ಐ.ಎನ್.ಎಸ್ ಘರಿಯಲ್'ನಲ್ಲಿ, ಕ್ಷಿಪಣಿ ಉಡಾವಣೆ ಸಾಮರ್ಥ್ಯ ಹೊಂದಿರುವ ನೌಕೆ 'ಐ.ಎನ್.ಎಸ್ ತಲ್ವಾರ್'ನಲ್ಲೂ ಅವರು ಕರ್ತವ್ಯ ನಿರ್ವಹಿಸಿದ್ದರು.

ಕ್ಯಾಪ್ಟನ್ ಸುಶೀಲ್ ಮೆನನ್ ಅವರು, ಇಂಡೋನೇಷ್ಯಾದ ನೌಕಾ ಕಮಾಂಡ್ ಮತ್ತು ಸ್ಟಾಫ್ ಕೋರ್ಸ್ ತರಬೇತಿಯನ್ನು, ಅಮೆರಿಕದ ಸಮರ ಕಾಲೇಜಿನಲ್ಲೂ ಅಧ್ಯಯನ ಮಾಡಿದ್ದಾರೆ. ಆ ಸಂದರ್ಭದಲ್ಲಿ ಅವರು ಪ್ರತಿಷ್ಠಿತ 'ರಾಬರ್ಟ್ ಇ ಬೇಟ್‌ಮನ್ಸ್ ಅಂತರರಾಷ್ಟ್ರೀಯ ಪ್ರಶಸ್ತಿ', 'ರಿಯರ್ ಅಡ್ಮಿರಲ್ ಜೋಸೆಫ್ ಸಿ ಸ್ಟ್ರಾಸರ್ ಅಂತರರಾಷ್ಟ್ರೀಯ ಪ್ರಶಸ್ತಿ'ಯಿಂದ ಸನ್ಮಾನಿತರಾಗಿದ್ದಾರೆ.

ವಿದ್ಯಾರ್ಹತೆ: ಮದ್ರಾಸ್ ವಿಶ್ವವಿದ್ಯಾಲಯದಿಂದ ರಕ್ಷಣೆ ಮತ್ತು ವ್ಯೂಹಾತ್ಮಕ ಅಧ್ಯಯನ ವಿಷಯದಲ್ಲಿ ಸ್ನಾತಕೋತ್ತರ ಪದವಿ, ಮುಂಬೈ ವಿಶ್ವವಿದ್ಯಾಲಯದಲ್ಲಿ ಎಂ.ಫಿಲ್ ಅಧ್ಯಯನ ಮಾಡಿದ್ದಾರೆ. ನೌಕಾಪಡೆಯ ಕೇಂದ್ರ ಕಚೇರಿಯಲ್ಲಿ, ಗೋವಾದ ಸಮರ ಕಾಲೇಜು ಸೇರಿದಂತೆ ವಿವಿಧ ಸಂಸ್ಥೆಗಳಲ್ಲಿ ಉನ್ನತ ಹುದ್ದೆಗಳನ್ನು ನಿಭಾಯಿಸಿದ್ದಾರೆ ಎಂದು ನೌಕಾಪಡೆಯ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.