ದಾಂಡೇಲಿ: ಸ್ವಚ್ಛತೆಯೇ ಸೇವೆ ಅಭಿಯಾನದ ಅಂಗವಾಗಿ ಇಲ್ಲಿಯ ತಾಲ್ಲೂಕು ಆಡಳಿತ ಹಾಗೂ ಪೌರಾಡಳಿತ ವತಿಯಿಂದ ಜೆ.ಎನ್.ರಸ್ತೆಯ ಪಟೇಲ್ ವೃತ್ತದಿಂದ ಸೋಮಾನಿ ವೃತ್ತದವರೆಗೆ ಭಾನುವಾರ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

ತಹಶೀಲ್ದಾರ್ ಶೈಲೇಶ್ ಪರಮಾನಂದ ಹಾಗೂ ಪೌರಾಯುಕ್ತರ ರಾಜಾರಾಮ ಪವಾರ ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು.

‘ಕಳೆದ ಒಂದು ವಾರದಿಂದ ನಗರದ ವಿವಿಧ ಭಾಗದಲ್ಲಿ ಸ್ವಚ್ಛತಾ ಅಭಿಯಾನ ನಡೆಯುತ್ತಿದ್ದು ಅ.2 ರಂದು ಗಣೇಶನಗರದ ನಾಗದೇವತಾ ದೇವಸ್ಥಾನದ ಆವರಣದಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುವುದು’ ಎಂದು ತಹಶೀಲ್ದಾರ್ ಶೈಲೇಶ್ ಪರಮಾನಂದ ತಿಳಿಸಿದರು.

ಎಸ್.ಎಸ್. ಸೂರಗಾವಿ ಸ್ಕೂಲ್, ಬಂಗೂರುನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕನ್ಯಾ ವಿದ್ಯಾಲಯ, ಆರ್.ಟಿ.ಒ ಸಿಬ್ಬಂದಿ, ಆಶ್ರಯ ಕಾಲೊನಿ, ಗಾಂಧಿನಗರದ,14ಬ್ಲಾಕ್ನ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು .

ನಗರಸಭೆ ನಿಕಟ ಪೂರ್ವ ಅಧ್ಯಕ್ಷೆ ಸರಸ್ವತಿ ರಜಪೂತ, ಮಜೀದ್ ಸನದಿ, ಸುಧಾ ರಾಮಲಿಂಗ ಜಾದವ್, ದಾದಾಪೀರ ನದಿಮುಲ್ಲ,ವಿ.ಎಸ್ ಕುಲಕರ್ಣಿ, ಪರಿಸರ ವಿಭಾಗದ ಶುಭಂ, ಆರೋಗ್ಯ ಅಧಿಕಾರಿ ವಿಲಾಸ್ ದೇವಕರ ಸೇರಿದಂತೆ ಅನೇಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.