ಕಾರವಾರ: ನಗರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಎರಡು ‘ಹೆಗ್ಗುರುತು’ಗಳ ಸ್ಥಾಪನೆಗೆ ಕರಾವಳಿ ನಿಯಂತ್ರಣ ವಲಯ ಪ್ರಾಧಿಕಾರ (ಸಿ.ಆರ್.ಝೆಡ್) ಅನುಮತಿ ನೀಡಿದೆ. ಇಲ್ಲಿ ಟುಪೆಲೋವ್ ಯುದ್ಧ ವಿಮಾನ ವಸ್ತು ಸಂಗ್ರಹಾಲಯ ಹಾಗೂ ಟ್ಯಾಗೋರರ ಪುತ್ಥಳಿ ಸ್ಥಾಪನೆ ಆಗಲಿವೆ.

ಐ.ಎನ್.ಎಸ್ ಚಾಪೆಲ್ ನೌಕೆಯ ವಸ್ತು ಸಂಗ್ರಹಾಲಯದ ಬಳಿಯಲ್ಲೇ ಯುದ್ಧ ವಿಮಾನ ವಸ್ತು ಸಂಗ್ರಹಾಲಯ ಆರಂಭವಾಗಲಿದೆ. ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತವು ನೌಕಾಪಡೆಯೊಂದಿಗೆ ಕೆಲವು ತಿಂಗಳ ಹಿಂದೆ ಒಪ್ಪಂದ ಮಾಡಿಕೊಂಡಿತ್ತು. ತಮಿಳುನಾಡಿನ ಆರಕ್ಕೋಣಂನಲ್ಲಿರುವ ವಿಮಾನದ ಭಾಗಗಳನ್ನು ಕಳಚಿ ಕಾರವಾರದಲ್ಲಿ ಮರು ಜೋಡಣೆ ಮಾಡಲಾಗುತ್ತದೆ. ಬಳಿಕ ಇದೊಂದು ಪ್ರವಾಸಿಗರ ಆಕರ್ಷಣೆಯ ತಾಣವಾಗಿ ಮಾರ್ಪಾಡಾಗಲಿದೆ.

ಟ್ಯಾಗೋರ್ ಪುತ್ಥಳಿ:ರವೀಂದ್ರನಾಥ ಟ್ಯಾಗೋರ್ ಕಡಲತೀರಕ್ಕೆ ಸಾಗುವ ದಾರಿಯಲ್ಲಿ ಸ್ವಾಗತ ಕಮಾನನ್ನು 1994ರಲ್ಲಿ ನಿರ್ಮಿಸಲಾಗಿತ್ತು. ಅಲ್ಲಿ 2004ರಲ್ಲಿ ಟ್ಯಾಗೋರರ ಕಂಚಿನ ಪುತ್ಥಳಿಯನ್ನು ಸ್ಥಾಪಿಸಲಾಗಿತ್ತು. ಇದು ಕಡಲತೀರಕ್ಕೆ ಹೋಗುವವರನ್ನು ಆಕರ್ಷಿಸುತ್ತಿತ್ತು. ಆದರೆ, ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿ ಸಲುವಾಗಿ ಪುತ್ಥಳಿಯನ್ನು 2018ರ ಮಾರ್ಚ್ 19ರಂದು ತೆರವು ಮಾಡಲಾಗಿತ್ತು. ಅದನ್ನು ಕಡಲತೀರದಲ್ಲಿರುವ ಗೋದಾಮಿನಲ್ಲಿ ಇಡಲಾಗಿತ್ತು.

ಪುತ್ಥಳಿಯ ಮರುಸ್ಥಾಪನೆಗೆ ಸಿ.ಆರ್.ಝೆಡ್ ಅನುಮತಿ ಸಿಕ್ಕಿರುವ ಕಾರಣ ಕಾಮಗಾರಿಗೆ ಶೀಘ್ರವೇ ಭೂಮಿಪೂಜೆ ನೆರವೇರಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಮೂರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಉದ್ದೇಶ ಜಿಲ್ಲಾಡಳಿತದ್ದಾಗಿದೆ. ಕಡಲತೀರಕ್ಕೆ ಸ್ವಾಗತ ಕಮಾನು, ರಸ್ತೆಯ ಅಂಚಿನಲ್ಲಿ ಬೇಲಿ ಅಳವಡಿಸುವ ಕೆಲಸವೂ ಇದರಲ್ಲಿ ಒಳಗೊಳ್ಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.