ಕಾರವಾರ: ಇಂಧನ ದರ ಹಾಗೂ ಮಾಲಿನ್ಯವೂ ಹೆಚ್ಚಾಗುತ್ತಿರುವ ಕಾರಣದಿಂದಾಗಿ ಪರಿಸರ ಸ್ನೇಹಿ, ವಿದ್ಯುತ್ ಚಾಲಿತ (ಎಲೆಕ್ಟ್ರಿಕ್) ವಾಹನಗಳಿಗೆ ಬೇಡಿಕೆಹೆಚ್ಚಾಗುತ್ತಿದೆ. ಹೀಗಾಗಿ, ಇಂಥ ವಾಹನಗಳಿಗೆ ಚಾರ್ಜಿಂಗ್ ಪ್ರಕ್ರಿಯೆ ಪೂರೈಸಲು ಜಿಲ್ಲೆಯಲ್ಲಿ 10 ಕೇಂದ್ರಗಳ ಸ್ಥಾಪನೆಗೆ ಯೋಜನೆ ಸಿದ್ಧಗೊಳ್ಳುತ್ತಿದೆ.

ಕಾರವಾರ ವಿಭಾಗದಲ್ಲಿ ಐದು ಹಾಗೂ ಶಿರಸಿ ವಿಭಾಗದಲ್ಲಿ ಐದು ‘ಇಲೆಕ್ಟ್ರಾನಿಕ್ ವೆಹಿಕಲ್ಸ್ ಚಾರ್ಜಿಂಗ್ ಸ್ಟೇಶನ್’ (ಇವಿಸಿಎಸ್) ಸ್ಥಾಪಿಸಲು ಯೋಜಿಸಲಾಗಿದೆ. ಕೇಂದ್ರಗಳನ್ನು ಸ್ಥಾಪಿಸಲು ಅಗತ್ಯ ಇರುವ ಜಾಗದಮಾಹಿತಿ ನೀಡುವಂತೆ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪೆನಿಯ (ಹೆಸ್ಕಾo) ಕೇಂದ್ರ ಕಚೇರಿಯಿಂದ ಇಲ್ಲಿನ ವಿಭಾಗಕ್ಕೆ ಪತ್ರ ಬರೆದು ಸೂಚಿಸಲಾಗಿದೆ.

ಜಾಗಕ್ಕಾಗಿ ಹುಡುಕಾಟ:

‘ಈಗಾಗಲೇ ಜಾಗದ ಹುಟುಕಾಟಕ್ಕೆ ಹುಬ್ಬಳ್ಳಿಯಿಂದ ನಮಗೆ ಸೂಚನೆ ಬಂದಿದೆ. ಅದರಂತೆ ಅಧಿಕಾರಿಗಳಿಗೆ ಮಾಹಿತಿ ನೀಡಿ, ಜಾಗವನ್ನು ಹುಡುಕುತ್ತಿದ್ದೇವೆ. ಒಂದು ಕೇಂದ್ರದ ಸ್ಥಾಪನೆಗೆ ಒಂದು ಸಾವಿರಚದರ ಅಡಿಜಾಗದ ಅವಶ್ಯಕತೆ ಇದೆ. ಇದರಲ್ಲಿ ಆರು ಚಾರ್ಜಿಂಗ್ ಪಾಯಿಂಟ್‌ಗಳನ್ನು ವ್ಯವಸ್ಥೆಗೊಳಿಸಲಾಗುತ್ತದೆ. ಮುಖ್ಯ ರಸ್ತೆಗೆ ಸಮೀಪ ಇರುವ ಪ್ರದೇಶದಲ್ಲಿ ಕೇಂದ್ರಗಳನ್ನು ಸ್ಥಾಪಿಸಲು ಯೋಜಿಸಲಾಗಿದ್ದು, ಅಂಥಜಾಗದ ಹುಡುಕಾಟದಲ್ಲಿದ್ದೇವೆ’ ಎನ್ನುತ್ತಾರೆಹೆಸ್ಕಾಂ ವಿಭಾಗೀಯ ಅಧಿಕಾರಿ ರೋಶ್ನಿ ಪೆಡ್ನೇಕರ್.

‘ಈ ಕೇಂದ್ರಗಳ ಸ್ಥಾಪನೆಗೆ ಸಮಯ ಹಿಡಿಯಬಹುದು. ಈವರೆಗೆ ಬೇರೆ ಯಾವುದೇ ಹೆಚ್ಚಿನ ಸೂಚನೆಗಳನ್ನು ಕೇಂದ್ರ ಕಚೇರಿಯಿಂದ ನಮಗೆ ನೀಡಿಲ್ಲ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಲ್ಲೆಯಲ್ಲಿವೆ 8 ಶೋರೂಂ:ನಿಸರ್ಗ ಇ– ಬೈಕ್ಸ್‌ನವರ ಎಂಟು ಶೋರೂಮ್‌ಗಳು ಈಗಾಗಲೇ ಜಿಲ್ಲೆಯಲ್ಲಿವೆ.ಸದ್ಯವಷ್ಟೇ ಆರಂಭಗೊಂಡಿರುವ ಈ ಎಲ್ಲ ಮಳಿಗೆಗಳಿಂದ 50ಬೈಕ್‌ಗಳು ಮಾರಾಟವಾಗಿವೆ.

‘ಜಿಲ್ಲೆಯ ಕರಾವಳಿ ಭಾಗದಲ್ಲಿಯೇ ಸುಮಾರು 10 ಚಾರ್ಜಿಂಗ್ ಸೆಂಟರ್‌ಗಳು ಸ್ಥಾಪನೆಗೊಂಡರೆ ಅನುಕೂಲವಾಗಲಿದೆ. ಇವುಗಳ ಸ್ಥಾಪನೆಯು ಶೀಘ್ರವಾಗಿ ಆಗಬೇಕಿದೆ. ಚಾರ್ಜಿಂಗ್ ಕೇಂದ್ರಗಳು ಎಲ್ಲಿಯೂ ಇಲ್ಲದಿರುವುದರಿಂದ, ಶೋರೂಮ್‌ಗೆ ಬರುವ ಅನೇಕ ಗ್ರಾಹಕರು ಬೈಕ್‌ಗಳನ್ನು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ’ ಎನ್ನುತ್ತಾರೆ ನಿಸರ್ಗ ಇ– ಬೈಕ್ಸ್‌ನ ಪ್ರತಿನಿಧಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.