ಭಟ್ಕಳ: ಪ್ರವಾದಿ ಮುಹಮ್ಮದ್ ಪೈಗಂಬರ ಅವರು ಮುಸ್ಲಿಂ ಜಾತಿಗೆ ಸೇರಿದವರು ಎಂದರೇ ತಪ್ಪಾಗುತ್ತದೆ. ಅವರು ಕೂಡ ಜಗತ್ತಿಗೆ ಬೆಳಕು ತೋರಿದ ಶರಣರಂತೆ ಮನುಕುಲಕ್ಕೆ ಸೇರಿದವರು ಎಂದು ಅಂಜುಮಲ್ ಪದವಿ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಆರ್.ಎಸ್.ನಾಯಕ ಹೇಳಿದರು.

ಸೋಮವಾರ ಈದ್ ಮಿಲಾದ್ ಹಬ್ಬದ ಅಂಗವಾಗಿ ಭಟ್ಕಳ ಜಮಾತೆ ಇಸ್ಲಾಮಿ ಹಿಂದ್ ವತಿಯಿಂದ ಪಟ್ಟಣದ ಶಂಸುದ್ದೀನ್ ವೃತ್ತದಲ್ಲಿ ಪ್ರವಾದಿ ಮುಹಮ್ಮದರ ಕುರಿತಾದ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪ್ರವಾದಿ ಮುಹಮ್ಮದ್ ಅವರು ಬಡವರು, ಮಹಿಳೆಯರು ಹಾಗೂ ಶೋಷಿತರ ಪರವಾಗಿ ಧ್ವನಿ ಎತ್ತಿವರು. ಅವರನ್ನು ಸಮಾಜ ಒಂದು ಧರ್ಮಕ್ಕೆ ಸೀಮಿತವಾಗಿ ನೋಡಿದರೆ ಅದು ಅವರಿಗೆ ಮಾಡಿದ ಅಪಚಾರ’ ಎಂದರು.

ಜಮಾತೆ ಇಸ್ಲಾಮಿ ಹಿಂದ್ ಭಟ್ಕಳ ಘಟಕ ಅಧ್ಯಕ್ಷ ಮೌಲಾನಾ ಸಯಯದ್ ಜುಬೇರ ಮಾತನಾಡಿ,‘ ಪ್ರವಾದಿ ಮುಹಮ್ಮದ ಪೈಗಂಬರ ಕುರಿತಂತೆ ಪ್ರವಾದಿ ಸಂದೇಶ ಅಭಿಯಾನವನ್ನು ಎಲ್ಲಾ ಸಮುದಾಯದ ಜನರಿಗಾಗಿ ಜಮಾತೆ ಇಸ್ಲಾಂಮಿ ಹಿಂದ್ ವತಿಯಿಂದ ಆಯೋಜಿಸಿದ್ದು, ಎಲ್ಲರೂ ಪ್ರವಾದಿ ಅವರ ಸಂದೇಶ ಅರಿಯಬೇಕಾದ ಅಗತ್ಯ ಇದೆ’ ಎಂದರು.

ಪುರಸಭೆಯ ಉಪಾಧ್ಯಕ್ಷ ಅಲ್ತಾಪ ಖರೂರಿ, ಐಟಾ ರಾಜ್ಯ ಘಟಕ ಅಧ್ಯಕ್ಷ ರಜಾ ಮಾನ್ವಿ ಮಾತನಾಡಿದರು.
ಪ್ರವಾದಿ ಮುಹಮ್ಮದ್ ಜೀವನ ಸಂದೇಶ ಕುರಿತಂತೆ ‘ಪ್ರಜಾವಾಣಿ’ಯಲ್ಲಿ ಪ್ರಕಟಗೊಂಡ ವಿಶೇಷ ಲೇಖನವನ್ನು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಿ ಸಿಹಿ ಹಂಚಲಾಯಿತು. ಜಮಾತೆ ಇಸ್ಲಾಮಿ ಹಿಂದ್‌ನ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.