ಕಾರವಾರ: ದೇಶದಲ್ಲಿ ಉಗ್ರರ ದಾಳಿಯಸಾಧ್ಯತೆಯಿರುವ ಕಾರಣ ಎಲ್ಲೆಡೆ ಭದ್ರತೆ ಹೆಚ್ಚಿಸಲಾಗಿದೆ. ವಿವಿಧ ಕಡೆಗಳಲ್ಲಿ ಪೊಲೀಸರು ಹಾಗೂ ಇತರ ಭದ್ರತಾ ಸಿಬ್ಬಂದಿ ವಾಹನಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಕಳುಹಿಸುತ್ತಿದ್ದಾರೆ.

ನಗರದ ಲಂಡನ್ ಬ್ರಿಜ್ ಬಳಿ ಆರಂಭಿಸಲಾಗಿರುವ ತಾತ್ಕಾಲಿಕ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ಶನಿವಾರ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಿದ್ದರು. ಅನುಮಾನ ಕಂಡ ವಾಹನಗಳನ್ನು ತಡೆದು ಅದರಲ್ಲಿರುವ ಎಲ್ಲ ವಸ್ತುಗಳನ್ನು ಕೂಲಂಕಷವಾಗಿ ಪರಿಶೀಲಿಸುತ್ತಿರುವುದು ಕಂಡುಬಂತು.

ಇತ್ತ ಕಾರವಾರ ವಾಣಿಜ್ಯ ಬಂದರಿನ ಜಟ್ಟಿಯಲ್ಲಿ ತಟರಕ್ಷಕ ದಳದ ಎರಡು ದೋಣಿಗಳನ್ನು ನಿಯೋಜಿಸಲಾಗಿದೆ.ಬೈತಖೋಲ್ ಮೀನುಗಾರಿಕಾ ಬಂದರಿಗೆ ಬಂದು ಹೋಗುವ ದೋಣಿಗಳ ಮೇಲೂ ಭದ್ರತಾ ಸಿಬ್ಬಂದಿ ಗಮನ ಹರಿಸಿದ್ದಾರೆ.

ದೇಶದ ವಿವಿಧೆಡೆ ಕಟ್ಟೆಚ್ಚರ ಘೋಷಣೆ ಮಾಡಿರುವ ಸಂಬಂಧ ನಗರದಲ್ಲೂ ಎಚ್ಚರಿಕೆ ವಹಿಸುವಂತೆ ಮೀನುಗಾರಿಕೆ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಶುಕ್ರವಾರ ಸೂಚಿಸಿದ್ದರು. ಸೀಬರ್ಡ್ ನೌಕಾನೆಲೆಯಲ್ಲೂ ಸಾಮಾನ್ಯ ದಿನಗಳಿಗಿಂತ ಹೆಚ್ಚಿನ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.