ಭಟ್ಕಳ: ಜ್ವರ, ಕೆಮ್ಮು, ಗಂಟಲುನೋವು, ಮೈಕೈ ನೋವು ಎಂದು ಹೇಳುತ್ತ ಬಂದ ನೂರಾರು ಜನರಿಗೆ ಪಟ್ಟಣದಜಾಲಿ ರಸ್ತೆಯ ಬೆಂಡೆಕಾನ್ನಲ್ಲಿ ಹೋಮಿಯೋಪಥಿವೈದ್ಯರೆಂದು ಹೇಳಿಕೊಂಡ ವ್ಯಕ್ತಿಯೊಬ್ಬರು ಔಷಧಿ ನೀಡಿದ್ದಾರೆ.ಈ ವಿಷಯ ತಿಳಿದ ತಾಲ್ಲೂಕು ಆಡಳಿತ ಅಧಿಕಾರಿಗಳು, ಅವರ ಮತ್ತು ಕುಟುಂಬವನ್ನುಕ್ವಾರಂಟೈನ್ ಮಾಡಿದ್ದಾರೆ.ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಿದ್ದಾರೆ.

ಭಟ್ಕಳದಲ್ಲಿ ಒಂದು ಎರಡರ ಸಂಖ್ಯೆಯಲ್ಲಿ ದೃಢಪಡುತ್ತಿದ್ದ ಕೋವಿಡ್ 19 ಪ್ರಕರಣಗಳು, ಕೇವಲಮೂರು ದಿನಗಳಲ್ಲಿ ದಿಢೀರನೆ 28ಕ್ಕೆ ಏರಿಕೆಯಾಗಿದೆ. ಹಾಗಾಗಿತಾಲ್ಲೂಕು ಆಡಳಿತವುಯಾವುದೇ ಖಾಸಗಿಆಸ್ಪತ್ರೆಯ ವೈದ್ಯರು, ಕೊರೊನಾ ಸೋಂಕು ಲಕ್ಷಣವಿರುವ ವ್ಯಕ್ತಿಗಳಿಗೆ ಚಿಕಿತ್ಸೆ ನೀಡಬಾರದು.ಅವರನ್ನು ತಾಲ್ಲೂಕು ಸರ್ಕಾರಿ ಆಸ್ಪತ್ರೆಯ ಜ್ವರ ತಪಾಸಣೆ ಕೇಂದ್ರಕ್ಕೆ ಕಳುಹಿಸಬೇಕು ಎಂದು ಆದೇಶಿಸಿತ್ತು.ಆದರೆ, ಈವ್ಯಕ್ತಿಆದೇಶವನ್ನುಉಲ್ಲಂಘಿಸಿ ನೂರಾರು ಜನರಿಗೆ ಚಿಕಿತ್ಸೆ ನೀಡಿದ್ದಾರೆ.

ಬೆಳಕಿಗೆ ಬಂದಿದ್ದು ಹೀಗೆ:ಎರಡು ದಿನಗಳ ಹಿಂದೆ ಜಾಲಿ ಪಟ್ಟಣ ಪಂಚಾಯ್ತಿಯ ಅಧಿಕಾರಿಯೊಬ್ಬರು ರಾತ್ರಿ ಕರ್ತವ್ಯದಲ್ಲಿದ್ದರು. ಆಗ ಕೆಮ್ಮುತ್ತಾ ಬರುತ್ತಿದ್ದ ವ್ಯಕ್ತಿಯೊಬ್ಬರನ್ನು ವಿಚಾರಿಸಿದಾಗ, ತನಗಿರುವ ಆರೋಗ್ಯ ಸಮಸ್ಯೆಯ ಬಗ್ಗೆತಿಳಿಸಿದರು. ಅಲ್ಲದೇ ಹೋಮಿಯೋಪಥಿವೈದ್ಯರಬಳಿ ಚಿಕಿತ್ಸೆ ಪಡೆದುಕೊಂಡು ಬರುತ್ತಿರುವುದಾಗಿ ಹೇಳಿದ್ದರು. ಆಗಈ ವಿಚಾರಬೆಳಕಿಗೆ ಬಂತು.

ಈ ವಿಷಯವನ್ನು ತಾಲ್ಲೂಕು ಆಡಳಿತದ ಗಮನಕ್ಕೆ ತಂದಾಗ, ಅಧಿಕಾರಿಗಳು ಪೊಲೀಸ್ ಇಲಾಖೆಯ ಸಹಕಾರದಿಂದ ಕಾರ್ಯಾಚರಣೆ ಮಾಡಿದರು. ಆ ವ್ಯಕ್ತಿಯನ್ನು ಶನಿವಾರ ಕರೆದುಕೊಂಡು ಬಂದು ಕ್ವಾರಂಟೈನ್ ಮಾಡಿದರು. ಬಳಿಕ ಅವರ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಿ, ಕುಟುಂಬವನ್ನೂ ಕ್ವಾರಂಟೈನ್ ಮಾಡಿದರು.

ಪೊಲೀಸ್ ವಿಚಾರಣೆ:‘ಹೋಮಿಯೋಪಥಿ ವೈದ್ಯರನ್ನು ಪೊಲೀಸ್ ಇಲಾಖೆಯಿಂದ ಸಹ ವಿಚಾರಣೆ ಮಾಡಲಾಗಿದೆ. ಸದ್ಯ ವೈದ್ಯರನ್ನು ಕ್ವಾರಂಟೈನ್ ಮಾಡಲಾಗಿದೆ. ಅವರ ಗಂಟಲುದ್ರವದ ಪರೀಕ್ಷೆಯ ವರದಿ ಬಂದ ಬಳಿಕ ತನಿಖೆ ಮುಂದುವರಿಸಲಾಗುತ್ತದೆ’ಎಂದು ಡಿ.ವೈ.ಎಸ್.ಪಿ ಗೌತಮ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.