ಹೊನ್ನಾವರ: ತಾಲ್ಲೂಕಿನಲ್ಲಿ ಗುರುವಾರವೂ ಮಳೆ ಸುರಿದಿದ್ದು, ನದಿ ಹಾಗೂ ಹಳ್ಳಗಳಲ್ಲಿನ ನೆರೆ ನೀರು ತಗ್ಗು ಪ್ರದೇಶಗಳಿಗೆ ನುಗ್ಗಿ ನೂರಾರು ಸಂತ್ರಸ್ತರು ವಿವಿಧ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ.

ಬುಧವಾರ ನೆರೆ ತಗ್ಗಿದ್ದರಿಂದ ಕೆಲವು ಕಾಳಜಿ ಕೇಂದ್ರಗಳಿಂದ ಜನರು ಮನೆಗೆ ತೆರಳಿದ್ದರು. ಗುರುವಾರ ಬೆಳಗಿನಿಂದಲೇ ನೀರು ಏರತೊಡಗಿದ್ದರಿಂದ ಸಂತ್ರಸ್ತರು ಮತ್ತೆ ಕಾಳಜಿ ಕೇಂದ್ರಗಳಿಗೆ ತೆರಳಿದರು.

ಭಾಸ್ಕೇರಿ ಕಡತೋಕ, ಹಳದೀಪುರ, ಗುಂಡಿಬೈಲ್ ಸೇರಿದಂತೆ ಕನಿಷ್ಠ 10 ಕಡೆಗಳಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದೆ. ಕಾಳಜಿ ಕೇಂದ್ರಗಳು ಹಾಗೂ ಅಲ್ಲಿರುವ ಸಂತ್ರಸ್ತರ ನಿಖರ ಸಂಖ್ಯೆಯ ಮಾಹಿತಿ ಕಲೆ ಹಾಕುತ್ತಿದ್ದೇವೆ‘ ಎಂದು ತಹಶೀಲ್ದಾರ್ ಕಚೇರಿಯ ಸಿಬ್ಬಂದಿ ತಿಳಿಸಿದರು.

’ಈ ನಡುವೆ ಘಟ್ಟದ ಮೇಲ್ಭಾಗದಲ್ಲೂ ಮಳೆ ಪ್ರಮಾಣ ಹೆಚ್ಚಿರುವುದರಿಂದ ಗುಂಡಬಾಳ ನದಿಯ ನೆರೆ ತಗ್ಗುತ್ತಿಲ್ಲ,ಭಾಸ್ಕೇರಿ ಹಳ್ಳ– ದಂಡೆಗಳಲ್ಲೂ ಆತಂಕದ ಸ್ಥಿತಿಯಿದೆ. ಗುಡ್ನಕಟ್ಟು ಹಳ್ಳದ ನೆರೆ ನೀರು ಕಡತೋಕಾ ಗ್ರಾಮದ ಹೆಬ್ಬಲೆಕೊಪ್ಪ ಮೊದಲಾದ ಪ್ರದೇಶಗಳು ಜಲಾವೃತವಾಗಿದೆ, ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ರಾಮಚಂದ್ರ ನಾಯ್ಕ ಅವರ ಮನೆಗೂ ನೆರೆ ನೀರು ನುಗ್ಗಿದೆ.

ತಾಲ್ಲೂಕಿನ ವಿವಿಧೆಡೆ ಗುಡ್ಡ ಕುಸಿದ ಹಾಗೂ ಮರಗಳು ಉರುಳಿ ಬಿದ್ದ ಘಟನೆಗಳು ನಡೆದಿದ್ದು ಭಾಸ್ಕೇರಿ ಸಾಣ್ಮನೆಕೇರಿಯ ಮನೆಯೊಂದರ ಮೇಲೆ ಗುಡ್ಡ ಕುಸಿದು ಹಾನಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.