ಕಾರವಾರ: ಇಲ್ಲಿನ ಕೋಡಿಬಾಗದಲ್ಲಿ ಕಾಳಿ ಸೇತುವೆ ಅವಶೇಷ ತೆರವು ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗಿದೆ ಎಂಬ ದೂರು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

ಆ.7ರ ತಡರಾತ್ರಿ 41 ವರ್ಷದಷ್ಟು ಹಳೆಯ ಸೇತುವೆ ಕುಸಿದು ಬಿದ್ದಿತ್ತು. 320 ಮೀ.ನಷ್ಟು ಭಾಗ ಕುಸಿದು ನದಿಗೆ ಬಿದ್ದಿದ್ದರೆ, 330 ಮೀ.ನಷ್ಟು ಭಾಗ ಗಟ್ಟಿಯಾಗಿಯೇ ನಿಂತಿದೆ. ಸೇತುವೆಯ ಅವಶೇಷ ತೆರವುಗೊಳಿಸುವ ಮುನ್ನ ಗಟ್ಟಿಯಾಗಿ ನಿಂತಿರುವ ಸೇತುವೆಯ ಉಳಿದ ಅರ್ಧ ಭಾಗ ತೆರವುಗೊಳಿಸಿಕೊಳ್ಳಲು ತಜ್ಞರು ಸಲಹೆ ನೀಡಿರುವ ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ ಅವುಗಳನ್ನು ತೆರವಗೊಳಿಸಲು ಗುತ್ತಿಗೆ ಪಡೆದ ಐ.ಆರ್.ಬಿ ಕಂಪನಿ ಮುಂದಾಗಿದೆ.

‘ಕಾಳಿನದಿಯಲ್ಲಿ ದೊಡ್ಡ ಗಾತ್ರದ ಬಾರ್ಜ್ಗಳು, ಯಂತ್ರೋಪಕರಣನ್ನು ಬಳಸಿ ಕಾರ್ಯಾಚರಣೆ ನಡೆಸುವುದು ಕಾಣಿಸುತ್ತಿದೆ. ಆದರೆ ಸೇತುವೆ ತೆರವುಗೊಳಿಸುವ ವೇಗ ಮಾತ್ರ ಚುರುಕು ಪಡೆದಿಲ್ಲ. ಹೀಗೆಯೇ ಕಾರ್ಯಾಚರಣೆ ನಡೆಸಿದರೆ ಅವಶೇಷ ತೆರವಿಗೆ ಇನ್ನೂ ವರ್ಷ ಕಾಲವಾದರೂ ತಗುಲಬಹುದು’ ಎನ್ನುತ್ತಾರೆ ಸ್ಥಳಿಯರಾದ ನಾಗೇಶ್.

‘ಸೇತುವೆಯ ಬದಿಯಲ್ಲಿನ ಕಾಂಕ್ರೀಟ್ ಸುರಕ್ಷತಾ ಗೋಡೆ ತೆರವುಗೊಳಿಸಿಕೊಳ್ಳಲಾಗುತ್ತಿದೆ. ಅದಾದ ಬಳಿಕ ಹಂತ ಹಂತವಾಗಿ ಸೇತುವೆಯ ಬಿಡಿಭಾಗ ತೆರವುಗೊಳಿಸುತ್ತೇವೆ. ಕಾರ್ಯಾಚರಣೆಗೆ 5 ಸಾವಿರ ಟನ್ ಭಾರ ಎತ್ತುವ ಸಾಮರ್ಥ್ಯ ಹೊಂದಿರುವ ಕ್ರೇನ್ ಸಹಿತ ಬಾರ್ಜ್ ಬರಬೇಕಿದೆ. ಅದು ಬಂದ ಬಳಿಕ ಕಾರ್ಯಾಚರಣೆ ವೇಗ ಪಡೆಯಲಿದೆ’ ಎಂದು ಕಂಪನಿಯ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.