ಕಾರವಾರ: ಗೋವಾದಿಂದ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ಖಾಸಗಿ ಬಸ್ನ್ನು ತಾಲ್ಲೂಕಿನ ಮಾಜಾಳಿ ಚೆಕ್ಪೋಸ್ಟ್ ಬಳಿ ಅಬಕಾರಿ ಅಧಿಕಾರಿಗಳು ಗುರುವಾರ ಸಂಜೆ ವಶಕ್ಕೆ ಪಡೆದಿದ್ದಾರೆ.

‘ಗೋವಾ ಕಡೆಯಿಂದ ಕಾರವಾರ ಮಾರ್ಗವಾಗಿ ಮೈಸೂರಿನತ್ತ ಸಾಗುತ್ತಿದ್ದ ಖಾಸಗಿ ಬಸ್ನ್ನು ತಪಾಸಣೆ ನಡೆಸಿದ ವೇಳೆ ಅಂದಾಜು ₹1 ಲಕ್ಷ ಮೌಲ್ಯದ 73.5 ಲೀ ಗೋವಾ ಮದ್ಯ ಮತ್ತು 3.9 ಲೀ. ಬಿಯರ್ ಪತ್ತೆಯಾದವು. ಬಸ್ನೊಳಗಿದ್ದ ಅಕ್ರಮ ಮದ್ಯ ದಾಸ್ತಾನು ಸಹಿತ ಅಂದಾಜು ₹25 ಲಕ್ಷ ಮೌಲ್ಯದ ಬಸ್ನ್ನೂ ವಶಕ್ಕೆ ಪಡೆಯಲಾಗಿದೆ’ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

‘ಮದ್ಯ ಅಕ್ರಮ ಸಾಗಾಟ ಮಾಡಿದ ಕಾರಣಕ್ಕೆ ಬಸ್ ಚಾಲಕ ಮೈಸೂರು ಜಿಲ್ಲೆ ನರಸಿಂಹಪುರ ತಾಲ್ಲೂಕಿನ ಕೃಷ್ಣ ಆರ್ (38) ವಿರುದ್ಧ ಪ್ರಕರಣ ದಾಖಲಿಸಿದ್ದೇವೆ’ ಎಂದೂ ತಿಳಿಸಿದ್ದಾರೆ.

ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತರ ನಿರ್ದೇಶನದ ಮೇರೆಗೆ ಕಾರ್ಯಾಚರಣೆ ನಡೆಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.