ಕಾರವಾರ: ಕುಮಟಾದ ಪೆಟ್ರೋಲ್ ಬಂಕ್ ಒಂದರಿಂದ ಸೋಮವಾರ ಆಯಿಲ್ ಖರೀದಿಸಲು ಬಂದಿದ್ದ ವ್ಯಕ್ತಿಯೊಬ್ಬ ಬಂಕ್‌ನ ನಗದು ಕೌಂಟರ್‌ನಲ್ಲಿದ್ದ ₹1 ಲಕ್ಷ ಕಳವು ಮಾಡಿ ಪರಾರಿಯಾಗಿದ್ದಾನೆ. ಈ ಕೃತ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪೊಲೀಸರು ಆರೋಪಿಯ ಹುಡುಕಾಟ ನಡೆಸುತ್ತಿದ್ದಾರೆ.

ಕುಮಟಾ ಮೂರೂರು ಕ್ರಾಸ್‌ನಲ್ಲಿರುವ ವಿ.ಎಂ. ಮಿರ್ಜಾನಕರ್ ಪೆಟ್ರೋಲ್ ಬಂಕ್‌ನಲ್ಲಿ ಈ ಕಳವು ನಡೆದಿದೆ. ಬೈಕ್‌ನಲ್ಲಿ ಬಂದ ಆರೋಪಿ, ಆಯಿಲ್ ನೀಡುವಂತೆ ಕೇಳಿದ್ದ.

ಅದೇ ಸಂದರ್ಭದಲ್ಲಿ ಬಂಕ್‌ಗೆ ಮೂರು ನಾಲ್ಕು ವಾಹನಗಳು ಬಂದಿದ್ದವು. ಬಂಕ್ ಸಿಬ್ಬಂದಿ ಈ ವೇಳೆ ನಗದು ಪೆಟ್ಟಿಗೆಗೆ ಬೀಗ ಹಾಕದೇ ಇಂಧನ ನೀಡಲು ಹೋಗಿದ್ದರು.

ಈ ಸಮಯವನ್ನೇ ಉಪಯೋಗಿಸಿಕೊಂಡ ಆರೋಪಿ ನಗದನ್ನು ಜೇಬಿಗಿಳಿಸಿ ಪರಾರಿಯಾಗಿದ್ದಾನೆ. ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.