ಕುಮಟಾ: ಶಿರಸಿ, ಸಿದ್ದಾಪುರದಲ್ಲಿ ನಿರಂತರವಾಗಿ ಮಳೆಯಾದ ಪರಿಣಾಮ ಅಘನಾಶಿನಿಗೆ ಒಳಹರಿವು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದರ ಪರಿಣಾಮ ಕುಮಟಾ ತಾಲ್ಲೂಕಿನ ಹಲವು ಗ್ರಾಮಗಳಿಗೆ ಬುಧವಾರ ನೆರೆ ನೀರು ನುಗ್ಗಿತು.

ಹೆಗಡೆ ಗ್ರಾಮದ ನದಿಯಂಚಿನ ಕೆಲವು ಕುಟುಂಬಗಳು ಮೇಲ್ಭಾಗದ ಸಂಬಂಧಿಕರ ಮನೆಗಳಿಗೆ ತೆರಳಿದ್ದಾರೆ. ನದಿಯಂಚಿನ ದೀವಗಿ, ಮಿರ್ಜಾನ ಗ್ರಾಮಗಳ ಜನವಸತಿ ಪ್ರದೇಶಗಳು ಜಲಾವೃತವಾದವು.

‘ನೀರು ನುಗ್ಗಿದರೆ ತಕ್ಷಣ ಸಮೀಪದ ಪರಿಹಾರ ಕೇಂದ್ರಕ್ಕೆ ಕರೆ ತರಲಾಗುವುದು. ದ್ವೀಪ ಗ್ರಾಮವಾದ ಐಗಳಕುರ್ವೆಯ ಜನರು ಸುರಕ್ಷಿತ ಸ್ಥಳಕ್ಕೆ ಕರೆ ತರಲು ದೋಣಿ ಇಡಲಾಗಿದೆ’ ಎಂದು ಹೆಗಡೆ ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ದಿನಕರ ಶೆಟ್ಟಿ ತಿಳಿಸಿದರು.

ಶಿರಸಿ– ಕುಮಟಾ ನಡುವಿನ ಕತಗಾಲದಲ್ಲಿ ಚಂಡಿಕಾ ಹೊಳೆ ಉಕ್ಕಿ ಹರಿಯಿತು. ಇದರ ಪರಿಣಾಮ ರಾಜ್ಯ ಹೆದ್ದಾರಿಯ ಮೇಲೆ ಸುಮಾರು ಮೂರು ಅಡಿಗಳಷ್ಟು ನೀರು ನಿಂತಿತು. ಅಂದಾಜು ಮೂರು ಗಂಟೆಗಳ ಬಳಿಕ ನೀರು ಇಳಿದು, ವಾಹನ ಸಂಚಾರ ಪುನಃ ಆರಂಭವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.