ಗೋಕರ್ಣ: ಕಾರವಾರ, ಹಳಿಯಾಳ, ಜೊಯಿಡಾವನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ಹೇಳಿಕೆ ನೀಡಿರುವ ಎಂ.ಇ.ಎಸ್ ನ ನಿರಂಜನ್ ದೇಸಾಯಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಗೌಡ ಬಣದ ಗೋಕರ್ಣ ಘಟಕ ಒತ್ತಾಯಿಸಿದೆ.

ನಿರಂಜನ ದೇಸಾಯಿ ನಾಮಪತ್ರ ಸಲ್ಲಿಕೆಯ ವೇಳೆ ನಾಡದ್ರೋಹದ ಮಾತನಾಡಿದ್ದು, ಅನಾವಶ್ಯಕವಾಗಿ ಜನರಲ್ಲಿ ಗೊಂದಲದ ವಾತಾವರಣ ನಿರ್ಮಿಸುತ್ತಿದ್ದಾರೆ. ಇದು ಚುನಾವಣಾ ನೀತಿ ಸಂಹಿತೆಗೂ ವಿರುದ್ಧವಾದದ್ದು, ಜೊಯಿಡಾದಲ್ಲಿ ಯಾರೂ ಕೂಡಾ ಮಹಾರಾಷ್ಟ್ರಕ್ಕೆ ಸೇರಬೇಕೆಂದು ಹೇಳುತ್ತಿಲ್ಲ. ಈ ಭಾಗದ ಎಲ್ಲ ಜನರು ಕನ್ನಡ ನಾಡಿಗೆ ನಿಷ್ಠರಾಗಿ ಬದುಕುತ್ತಿದ್ದಾರೆ. ಹೀಗಿರುವಾಗ ನಿರಂಜನ ದೇಸಾಯಿ ಅನಾವಶ್ಯಕವಾಗಿ ಚುನಾವಣೆಯ ವೇಳೆ ಗಡಿ, ನುಡಿಯ ವಿಚಾರದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿರುವುದು ಖಂಡನಾರ್ಹವಾದದ್ದು ಎಂದರು.

ಪದೇ ಪದೇ ಇಂತಹ ಹೇಳಿಕೆ ನೀಡುತ್ತಿರುವ ಎಂಇಎಸ್‌ನ ನಿರಂಜನ್ ದೇಸಾಯಿ ಮತ್ತಿರರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಕರ್ನಾಟಕದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ನಿಷೇಧಿಸಬೇಕು ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಣಪತಿ ನಾಯ್ಕ್ ಒತ್ತಾಯಿಸಿದ್ದಾರೆ.

ಕರವೇ ಯುವ ಘಟಕ ಅಧ್ಯಕ್ಷ ಕುಮಾರ ದೀವಟಿಗೆ, ವಸಂತ್ ಶೆಟ್ಟಿ, ವಿನೋದ್ ನಾಯ್ಕ್, ವಿಜಯ ಮುಕ್ರಿ, ನಾಗು ಹೊಸನಗರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.