ಭಟ್ಕಳ: ಪಟ್ಟಣದ ಶ್ರೀ ನಾಗಯಕ್ಷೆ ಧರ್ಮಾರ್ಥ ಸಭಾ ಭವನದಲ್ಲಿ ಶನಿವಾರ ನಡೆದ ‘ನಮೋ ಭಾರತ-ಈಗ ಶುರುವಾಗಿದೆ ಭಾರತದ ಕಾಲ’ ಎನ್ನುವ ವಿಷಯದ ಕುರಿತು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿದರು.

ದೇಶದಲ್ಲಿ ಜನ ನೆಮ್ಮದಿಯಿಂದಿರಲು ಮೋದಿಜಿಯವರೇ ಏಕೆ ಬೇಕು ಎನ್ನುವ ಕುರಿತು ಬೆಳಕು ಚೆಲ್ಲಿದ ಅವರು ಮೋದಿಜಿಯವರ ಸಾಧನೆಯೇ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಲು ಇರುವ ಮುಖ್ಯ ಕಾರಣವಾಗಿದೆ ಎಂದರು.

‘ಕುಕ್ಕರ್ ಸ್ಫೋಟ ಮಾಡಿದವರನ್ನು ಬ್ರದರ್ಸ್ ಎಂದು ಕರೆಯುವ ಕಾಂಗ್ರೆಸ್ ಪಕ್ಷದವರು, ದುಷ್ಕೃತ್ಯ ಮಾಡುವವರನ್ನು ರಕ್ಷಣೆ ಮಾಡಿ ಉಳಿಸುವ ಪ್ರಯತ್ನ ಮಾಡಿದಂತಾಗುತ್ತದೆ. ಇದರಿಂದ ಮತ್ತಷ್ಟು ದುಷ್ಕೃತ್ಯಗಳು ನಡೆಯುವ ಸಾಧ್ಯತೆ ಇರುತ್ತದೆ. ಆದರೆ ಬೆಂಗಳೂರಿನಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಕೆಲವೇ ದಿನಗಳಲ್ಲಿ ಬಂಧಿಸಲಾಯಿತು. ಇಲ್ಲಿ ಬಾಂಬ್ ಸ್ಫೋಟ ಮಾಡಿದವರು ತಪ್ಪಿಸಿಕೊಂಡು ಹೋಗಲು ಸಾಧ್ಯವಿಲ್ಲ ಎನ್ನುವ ಸಂದೇಶ ಹೋದಾಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.