ಕಾರವಾರ: ಕೇಂದ್ರ ಸರ್ಕಾರವು ಮೀನುಗಾರರ ಅನುಕೂಲಕ್ಕಾಗಿ ಜಾರಿ ಮಾಡಿರುವ ‘ಪ್ರಧಾನಮಂತ್ರಿ ಮತ್ಸ್ಯ ಸಂಪದ’ ಯೋಜನೆಗೆ ತನ್ನ ಪಾಲನ್ನೂ ಕೊಡುವುದಾಗಿ ರಾಜ್ಯ ಸರ್ಕಾರವು ಕಳೆದ ಸಾಲಿನ ಬಜೆಟ್ನಲ್ಲಿ ಘೋಷಿಸಿತ್ತು. ಅದರ ಪ್ರಕಾರ ವಿವಿಧ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಕರಾವಳಿಯ ಮೂರು ಜಿಲ್ಲೆಗಳಿಗೆ ಒಟ್ಟು ₹ 62 ಕೋಟಿ ಅನುದಾನ ಮೀಸಲಿಟ್ಟಿತ್ತು.

ಈ ಯೋಜನೆಯಡಿ ಉತ್ತರ ಕನ್ನಡದಲ್ಲಿ ಸದ್ಯ ಆರು ಕಾರ್ಯಕ್ರಮಗಳು ಜಾರಿಯಲ್ಲಿವೆ. ರಾಜ್ಯ ಸರ್ಕಾರವು ಕಳೆದ ಬಜೆಟ್ನಲ್ಲಿ ಅನುದಾನ ಘೋಷಿಸಿದ ಬಳಿಕ ಹೊಸ ಐಸ್ ಪ್ಲ್ಯಾಂಟ್, ಹಳೆಯ ಐಸ್ ಪ್ಲ್ಯಾಂಟ್ ಆಧುನೀಕರಣ, ಮರದ ದೋಣಿಗಳನ್ನು ಫೈಬರ್ ದೋಣಿಗಳೊಂದಿಗೆ ಬದಲಾವಣೆ ಮಾಡಿಕೊಳ್ಳುವುದು ಕೂಡ ಇವುಗಳಲ್ಲಿ ಸೇರಿವೆ. ಸುಮಾರು 65 ವಿಭಾಗಗಳಲ್ಲಿ ಸಹಾಯಧನ ಪಡೆಯಲು ಅವಕಾಶವಿದ್ದರೂ ಫಲಾನುಭವಿಗಳು ಮುಂದೆ ಬರುತ್ತಿಲ್ಲ ಎಂದು ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಮೀನುಗಾರಿಕಾ ಇಲಾಖೆ ಉಪ ನಿರ್ದೇಶಕಿ ಕವಿತಾ ಆರ್.ಕೆ, ‘ಕಳೆದ ಸಾಲಿನಲ್ಲಿ ಆರು ವಿಭಾಗಗಳಲ್ಲಿ 10 ಮಂದಿ ಫಲಾನುಭವಿಗಳಿಗೆ ಸಬ್ಸಿಡಿ ನೀಡಲಾಗಿದೆ. ಅವರಲ್ಲಿ ಐಸ್ ಪ್ಲ್ಯಾಂಟ್ಗಳ ದುರಸ್ತಿ ಹಾಗೂ ದೋಣಿಗಳ ಬದಲಾವಣೆಯಲ್ಲಿ ತಲಾ ಮೂವರು ಫಲಾನುಭವಿಗಳಿದ್ದಾರೆ. ಅವರು ಒಟ್ಟು ₹ 1.10 ಕೋಟಿ ಸಬ್ಸಿಡಿ ಪಡೆದಿದ್ದಾರೆ’ ಎಂದು ತಿಳಿಸಿದರು.

‘ಈ ವರ್ಷವೂ ಮೀನುಗಾರಿಕೆಗೆ ಸಂಬಂಧಿಸಿದ ವಿವಿಧ ಕಾರ್ಯಗಳಿಗೆ ಸಹಾಯಧನ ಬಯಸಿ ಮತ್ಸ್ಯ ಸಂಪದ ಯೋಜನೆಯಡಿ ಅರ್ಜಿಗಳು ಸಲ್ಲಿಕೆಯಾಗಿವೆ. ಕ್ರಮಬದ್ಧವಾಗಿರುವ ಎಲ್ಲ ಅರ್ಜಿಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿ ಅನುಮೋದನೆಗೆ ಕಳುಹಿಸಲಾಗಿದೆ. ಅದರ ಪ್ರಕಾರ ಕೆಲಸಗಳನ್ನು ಪೂರ್ಣಗೊಳಿಸಿದ ಅರ್ಜಿದಾರರಿಗೆ ಸಬ್ಸಿಡಿ ನೀಡುವಂತೆ ಇಲಾಖೆಗೆ ಪ್ರಸ್ತಾವ ಕಳುಹಿಸಲಾಗುತ್ತದೆ’ ಎಂದರು.

‘ಇಂಥ ವಿಭಾಗಕ್ಕೆ ಇಂತಿಷ್ಟೇ ಅನುದಾನ ಎಂದು ಮೊದಲೇ ನಿಗದಿಯಾಗಿ ಹಂಚಿಕೆಯಾಗುವುದಿಲ್ಲ. ಕೇಂದ್ರದಿಂದ ಬಿಡುಗಡೆಯಾದ ಮೊತ್ತದಲ್ಲಿ ಪೂರ್ಣಗೊಂಡು ಕೆಲಸಗಳಿಗೆ ಸಬ್ಸಿಡಿ ಮೊತ್ತ ಬಿಡುಗಡೆ ಮಾಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ಒಂದೂ ಅರ್ಜಿಯಿಲ್ಲ!:

‘ಜಿಲ್ಲೆಯಲ್ಲಿ ಸಮುದ್ರ ಪಾಚಿ ಕೃಷಿಗೆ ಹೆಚ್ಚಿನ ಅವಕಾಶವಿದೆ. ಆದರೆ, ಸಹಾಯಧನಕ್ಕಾಗಿ ಯಾರೂ ಅರ್ಜಿ ಸಲ್ಲಿಸಿಲ್ಲ. ಹಾಗಾಗಿ ಇದರಲ್ಲಿ ಇಂತಿಷ್ಟು ಗುರಿ ಮತ್ತು ಸಾಧನೆ ಎಂದು ಹೇಳಲು ಸಾಧ್ಯವಿಲ್ಲ’ ಎಂದು ಕವಿತಾ ಆರ್.ಕೆ. ಹೇಳಿದ್ದಾರೆ.

‘ಈ ವರ್ಷ ಪಂಜರ ಪದ್ಧತಿಯಲ್ಲಿ ಮೀನು ಸಾಕಣೆಗೆ ಹೆಚ್ಚು ಬೇಡಿಕೆಯಿದೆ. ಕಳೆದ ಬಾರಿ ಮಾರ್ಚ್ ಕೊನೆಯಲ್ಲಿ ಸಬ್ಸಿಡಿ ಘೋಷಣೆಯಾಗಿತ್ತು. ಆದರೆ, ಮತ್ತೆರಡು ತಿಂಗಳಲ್ಲಿ ಮಳೆ ಶುರುವಾಗುವ ಕಾರಣ ಆ ಸಮಯದಲ್ಲಿ ಯಾರೂ ಪಂಜರ ಅಳವಡಿಸುವುದಿಲ್ಲ. ಅದೇ ರೀತಿ, ಈ ಬಾರಿ ಮೀನು ಸಾಗಣೆಗೆ ಬಳಕೆಯಾಗುವ ಇನ್ಸುಲೇಟೆಡ್ ಟ್ರಕ್ಗೆ ಹೆಚ್ಚು ಬೇಡಿಕೆಯಿದೆ. ಅವರನ್ನು ಈ ವರ್ಷ ಪರಿಗಣಿಸಲಾಗುತ್ತದೆ. ಹಾಗಾಗಿ ಈ ವರ್ಷ ಸಬ್ಸಿಡಿಯ ಒಟ್ಟು ಮೊತ್ತ ಈ ವರ್ಷ ಹೆಚ್ಚುವ ನಿರೀಕ್ಷೆಯಿದೆ’ ಎಂದು ತಿಳಿಸಿದ್ದಾರೆ.

ಕಳೆದ ವರ್ಷದ ಸಬ್ಸಿಡಿ ವಿವರ:

ಕಳೆದ ವರ್ಷ ಜಿಲ್ಲೆಯಲ್ಲಿ ಮತ್ಸ್ಯ ಸಂಪದ ಯೋಜನೆಯಡಿ ಹೊಸ ಐಸ್ ಪ್ಲ್ಯಾಂಟ್ನ ಒಂದು ಕಾಮಗಾರಿಗೆ ₹ 32 ಲಕ್ಷ, ಐಸ್ ಪ್ಲ್ಯಾಂಟ್ ದುರಸ್ತಿಯ ಮೂರು ಕಾಮಗಾರಿಗಳಿಗೆ ₹ 60 ಲಕ್ಷ, ಮೂರು ಫೈಬರ್ ದೋಣಿಗಳ ಖರೀದಿಗೆ ₹ 6 ಲಕ್ಷ, 10 ಟನ್ ಸಾಮರ್ಥ್ಯದ ಇನ್ಸುಲೇಟೆಡ್ ಟ್ರಕ್ ಖರೀದಿಗೆ ₹ 12 ಲಕ್ಷ, ಐಸ್ ಬಾಕ್ಸ್ ಇರುವ ದ್ವಿಚಕ್ರ ವಾಹನ ಖರೀದಿಗೆ ₹ 22 ಸಾವಿರ ಹಾಗೂ ಐಸ್ ಬಾಕ್ಸ್ ಇರುವ ಸೈಕಲ್ ಖರೀದಿಗೆ ₹ 4,700 ಸಬ್ಸಿಡಿ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.