ಕಾರವಾರ: ‘ಭತ್ತದ ಬೆಳೆಯಂತೂ ನೆರೆಹಾವಳಿಗೆ ಕೊಚ್ಚಿ ಹೋಯ್ತು. ಅದೇ ಜಾಗದಲ್ಲಿ ಶೇಂಗಾ ಬೆಳೆದು ಅದರ ಮೂಲಕವಾದರೂಆದಾಯಪಡೆಯುವ ನಿರೀಕ್ಷೆಯಲ್ಲಿದ್ದೆವು. ಆದರೆ, ನೀರಿನ ಕೊರತೆಯಿಂದ ಈ ಬಾರಿ ಇನ್ನೂ ಶೇಂಗಾ ಬೆಳೆ ಬಿತ್ತನೆ ಮಾಡಿಲ್ಲ...’

ಅಂಕೋಲಾ ತಾಲ್ಲೂಕಿನ ಅಗಸೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೊನ್ನಳ್ಳಿ ಭಾಗದ ರೈತರಅಳಲು ಇದು. ಗಂಗಾವಳಿ ನದಿಯ ದಡದಲ್ಲಿ ಏಳೆಂಟುವರ್ಷಗಳ ಹಿಂದೆ ಆರಂಭಿಸಲಾದಏತ ನೀರಾವರಿ ಈ ಭಾಗಕ್ಕೆ ನೀರಾವರಿ ಮೂಲವಾಗಿತ್ತು. ಆದರೆ, ಈ ಬಾರಿ ಪಂಪ್ ಹಾಳಾಗಿದೆ ಎಂಬ ಕಾರಣನೀಡಿ ಕೃಷಿಗೆ ಬೇಕಾದ ನೀರನ್ನುಹರಿಸುತ್ತಿಲ್ಲ ಎಂಬುದು ರೈತರಾದ ತಿಮ್ಮಪ್ಪ ಗೌಡ, ಗೋವಿಂದ ಗೌಡ ಹಾಗೂ ಮಂಗು ಹನುಮ ಗೌಡ ಅವರ ದೂರಾಗಿದೆ.

‘ಇಲ್ಲಿನ 100ಕ್ಕೂ ಹೆಚ್ಚು ಕುಟುಂಬಗಳು ಕೃಷಿಯನ್ನೇ ಅವಲಂಬಿಸಿವೆ. ಮಳೆಗಾಲದಲ್ಲಿಈ ಪ್ರದೇಶಜಲಾವೃತವಾಗಿಭತ್ತದ ಬೆಳೆಗೆ ಹಾನಿಯಾಗಿದೆ. ಈಗ ಶೇಂಗಾಕ್ಕೆ ನೀರಿನ ಅಭಾವ ಎದುರಾಗಿದೆ. ಪ್ರತಿವರ್ಷ ಏತ ನೀರಾವರಿ ಯೋಜನೆಯಿಂದ ನೀರು ಸರಬರಾಜು ಆಗುತ್ತಿತ್ತು. ಆದರೆ, ಈ ಬಾರಿ ಇನ್ನೂ ನೀರು ಪೂರೈಕೆ ಮಾಡಿಲ್ಲ’ ಎಂದು ಅವರು ಬೇಸರಿಸುತ್ತಾರೆ.

‘ಸುಮಾರು 150 ಎಕರೆಗಳಷ್ಟು ಜಮೀನಿನಲ್ಲಿಶೇಂಗಾವನ್ನು ಬೆಳೆಯುತ್ತೇವೆ. ಹಿಂದಿನ ವರ್ಷವೂ ಸಮರ್ಪಕವಾಗಿನೀರು ಪೂರೈಕೆಯಿಲ್ಲದೇ ಸಮಸ್ಯೆ ಎದುರಿಸಿದ್ದೆವು. ಈ ಸಲವಾದರೂ ರೈತರಿಗೆ ಅನುಕೂಲವಾಗುವಂತೆ ಅಗತ್ಯ ಪ್ರಮಾಣದ ನೀರು ಒದಗಿಸಬೇಕು. ಹಾಳಾಗಿರುವ ಪಂಪ್ ಅನ್ನು ಒಂದುವಾರದೊಳಗೆ ದುರಸ್ತಿಮಾಡಿಎಂದು ಸಣ್ಣ ನೀರಾವರಿ ಇಲಾಖೆಗೆ ಮನವಿಯನ್ನೂ ನೀಡಲಾಗಿದೆ. ಆದರೂ ಕ್ರಮ ವಹಿಸಿಲ್ಲ’ ಎಂದು ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಯಶವಂತ ಗೌಡ ಅಸಮಾಧಾನ ವ್ಯಕ್ತಪಡಿಸಿದರು.

‘ಸ್ವಲ್ಪ ದಿನದಲ್ಲಿ ಅಂಕೋಲಾ, ಸೀಬರ್ಡ್ ನೌಕಾನೆಲೆ ಹಾಗೂ ಕಾರವಾರದ ಭಾಗಗಳಿಗೆ ನೀರು ಪೂರೈಸುವ ಪ್ರಕ್ರಿಯೆ ಶುರುವಾಗುತ್ತದೆ.ಏತ ನೀರಾವರಿಯ ಪಂಪ್ ದುರಸ್ತಿಗೆ ವಿಳಂಬವಾದರೆ ನಾವು ಇಕ್ಕಟ್ಟಿಗೆ ಸಿಲುಕಬೇಕಾಗುತ್ತದೆ. ಕೃಷಿ ಚಟುವಟಿಕೆಗಳಿಗೆ ಬೇಕಾಗುವಷ್ಟು ನೀರು ಸಿಗದೇ ಉತ್ತಮ ಇಳುವರಿ ಸಿಗುವುದಿಲ್ಲ. ಇದರಿಂದ ಈಗಾಗಲೇ ನಷ್ಟದಲ್ಲಿರುವ ರೈತರಿಗೆ ಮತ್ತಷ್ಟು ಸಮಸ್ಯೆಯಾಗಬಹುದು’ ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ನಾಗಿ ಚಂದ್ರು ಗೌಡ ಸಮಸ್ಯೆಯನ್ನು ವಿವರಿಸಿದರು.

‘ನೆರೆಯಲ್ಲಿ ಪಂಪ್ಗೆ ಹಾನಿ’:‘ಅಂಕೋಲಾ ತಾಲ್ಲೂಕಿನ ಅಗಸೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೊನ್ನಳ್ಳಿ ಭಾಗದಲ್ಲಿ ಏತ ನೀರಾವರಿ ಯೋಜನೆಯಡಿಯಲ್ಲಿ ನೀರು ಸರಬರಾಜು ಆಗುತ್ತಿತ್ತು. ನೆರೆಯ ವೇಳೆ ಪಂಪ್ ಹೌಸ್ ಒಳಗಡೆ ನೀರು ಹೊಕ್ಕಿತ್ತು. ಸತತ ಎರಡು ದಿನ ಮುಳುಗಿದ್ದರಿಂದ 40 ಎಚ್.ಪಿ.ಯ ಮೂರೂ ಪಂಪ್ಗಳು ಹಾಳಾಗಿವೆ. ಪ್ಯಾನಲ್ ಬೋರ್ಡ್ಗೂ ಹಾನಿಯಾಗಿದೆ. ಮೇಲಧಿಕಾರಿಗಳು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ’ ಎಂದು ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಮನೋಹರ ಕಳಸ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.