ಕಾರವಾರ: ಇಲ್ಲಿನ ಅರ್ಜುನ್ ಚಿತ್ರಮಂದಿರದಲ್ಲಿ ಪಠಾಣ್ ಚಿತ್ರ ಪ್ರದರ್ಶಿದಂತೆ ಆಗ್ರಹಿಸಿ ಗುರುವಾರ ಪ್ರತಿಭಟನೆಗೆ ಯತ್ನಿಸಿದ ಹಿಂದೂ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

ದೇಶ ವಿರೋಧಿ ದೃಶ್ಯಗಳನ್ನು ತೋರಿಸಲಾಗಿದೆ ಎಂದು ಆರೋಪಿಸಿ ಪಠಾಣ್ ಚಿತ್ರ ಪ್ರದರ್ಶಿಸಲು ಅವಕಾಶ ನೀಡಬಾರದು ಎಂದು ಕಾರ್ಯಕರ್ತರು ಪೊಲೀಸರಿಗೆ ದೂರು ನೀಡಿದ್ದರು. ಪ್ರದರ್ಶನ ಮುಂದುವರೆದರೆ ಪ್ರತಿಭಟಿಸುವುದಾಗಿ ಬುಧವಾರ ಎಚ್ಚರಿಸಿದ್ದರು.

ಆದರೆ ಚಿತ್ರಮಂದಿರದಲ್ಲಿ ಪಠಾಣ್ ಚಲನಚಿತ್ರ ಪ್ರದರ್ಶನ ನಡೆಯುತ್ತಿದ್ದ ಕಾರಣ ಚಿತ್ರಮಂದಿರದ ಗೇಟಿಗೆ ಬೀಗ ಹಾಕಲು ಕಾರ್ತಕರ್ತರು ಮುಂದಾದರು. ಈ ವೇಳೆ ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ಪಡೆದು ಪೊಲೀಸ್ ಪರೇಡ್ ಮೈದಾನಕ್ಕೆ ಕರೆದೊಯ್ದರು.

ನಂದಕಿಶೋರ ನಾಯ್ಕ, ಕಮಲಾಕರ, ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.