ಕಾರವಾರ: ಆಗಸದಲ್ಲಿ 400 ವರ್ಷಗಳಿಗೆ ಒಮ್ಮೆ ಸಂಭವಿಸುವ ಅತ್ಯಂತ ಅಪರೂಪದ ವಿದ್ಯಮಾನವನ್ನು ನಗರದ ಜನರು ಸೋಮವಾರ ಕಣ್ತುಂಬಿಕೊಂಡರು. ಶನಿ ಮತ್ತು ಗುರುಗ್ರಹಗಳನ್ನು ಅತ್ಯಂತ ಸನಿಹದಲ್ಲಿ ನೋಡಿ ಸಂತಸ ಪಟ್ಟರು.

ಎರಡೂ ಗ್ರಹಗಳು ‘ಆರು ಆರ್ಕ್ 40 ಮಿನಿಟ್ಸ್’ (ಒಂದು ಡಿಗ್ರಿಗೂ ಕಡಿಮೆ) ಅಂತರದಲ್ಲಿ ಗೋಚರಿಸಿದವು. ಈ ಸನ್ನಿವೇಶವನ್ನು ನೋಡಲು ಇಲ್ಲಿನ ಪ್ರಾದೇಶಿಕ ವಿಜ್ಞಾನ ಕೇಂದ್ರವು ಕಾಳಿ ನದಿ ಸೇತುವೆಯ ಬಳಿ ದೂರದರ್ಶಕದ ವ್ಯವಸ್ಥೆ ಮಾಡಿತ್ತು. ಖಗೋಳ ವಿಷಯಗಳಲ್ಲಿ ಆಸಕ್ತಿ ಇರುವ ನೂರಾರು ಜನರು, ವಿಶೇಷವಾಗಿ ಯುವಕರು ಬಂದು ಎರಡೂ ಗ್ರಹಗಳನ್ನು ನೋಡಿದರು. ಶನಿಗ್ರಹದ ಸುತ್ತಲೂ ಇರುವ ಬಳೆಯ ಆಕಾರವನ್ನೂ ನೋಡಿ ಪುಳಕಿತರಾದರು.

ಈ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ವಿಜ್ಞಾನ ಕೇಂದ್ರದ ಶೈಕ್ಷಣಿಕ ಸಹಾಯಕಿ ಕವಿತಾ ಎಲ್. ಬಾಡಕರ್, ಸದಸ್ಯ ಕಾರ್ಯದರ್ಶಿ ಡಾ.ಸಂಜೀವ ದೇಶಪಾಂಡೆ, ‘ಶನಿಗ್ರಹ ಮತ್ತು ಗುರುಗ್ರಹಗಳು 20 ವರ್ಷಗಳಿಗೊಮ್ಮೆ ಸಮೀಪ ಬರುತ್ತವೆ. ಆಗ ಸಾಮಾನ್ಯವಾಗಿ ಒಂದು ಡಿಗ್ರಿಯಷ್ಟು ಅಂತರವಿರುತ್ತದೆ. ಅಂತಹ ಸನ್ನಿವೇಶವು 2000ನೇ ಇಸವಿಯಲ್ಲಿ ಆಗಿತ್ತು. ಆದರೆ, ಈ ಬಾರಿ ಬಂದಷ್ಟು ಸಮೀಪಕ್ಕೆ ಇನ್ನೊಮ್ಮೆ ಬರಲು 400 ವರ್ಷ ಕಾಯಬೇಕು’ ಎಂದು ವಿವರಿಸಿದರು.

‘ಗುರುಗ್ರಹವು ತನ್ನ ಕಕ್ಷೆಯಲ್ಲಿ ಸೂರ್ಯನ ಸುತ್ತ ಒಂದು ಸುತ್ತು ಬರಲು ಭೂಮಿಯ 12 ವರ್ಷಗಳು ಬೇಕು. ಅದೇರೀತಿ, ಶನಿಗ್ರಹಕ್ಕೆ 30 ವರ್ಷಗಳು ಅಗತ್ಯ. ಈ ರೀತಿ ಸುತ್ತು ಬರುತ್ತ ಒಂದಕ್ಕೊಂದು ಸನಿಹ ಬರುತ್ತವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.