ಶಿರಸಿ: ‘ಅತಿವೃಷ್ಟಿಯಿಂದ ಸಂಪೂರ್ಣ ಮನೆ ಕಳೆದುಕೊಂಡ ಸಂತ್ರಸ್ತರಿಗೆ ₹ 5 ಲಕ್ಷ ಕೊಡಬೇಕು, ಭಾಗಶಃ ಮನೆ ನಾಶವಾದವರಿಗೆ ₹ 2.50 ಲಕ್ಷ ನೀಡಬೇಕು. ಜತೆಗೆ, ಸಂತ್ರಸ್ತರು ಮನೆ ನಿರ್ಮಿಸಿಕೊಳ್ಳುವವರೆಗೆ ಬಾಡಿಗೆ ಮನೆ ಅಥವಾ ಬೇರೆ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಮಾಡಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಒತ್ತಾಯಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೇರಳ ವಯನಾಡು ದುರಂತಕ್ಕೆ ಸಂತಾಪವಿದೆ. ಆದರೆ, ಕರ್ನಾಟಕದ ಸಿಎಂ ಸಿದ್ಧರಾಮಯ್ಯ ಅಲ್ಲಿನ ಸಂತ್ರಸ್ತರಿಗೆ 100 ಮನೆಗಳನ್ನು ಕಟ್ಟಿಸಿ ಕೊಡಲು ಹೊರಟಿದ್ದಾರೆ. ಆದರೆ, ರಾಜ್ಯದ ವಿವಿಧ ಭಾಗಗಳಲ್ಲಿ ದುರಂತವೇ ಹೊದ್ದು ಮಲಗಿರುವಾಗ, ಇಲ್ಲಿಯೇ ಮನೆ ಇಲ್ಲದ ಲಕ್ಷಾಂತರ ಕುಟುಂಬ ಇದ್ದಾಗ ಸಿಎಂ ಪಕ್ಕದ ಮನೆ ಚಿಂತೆ ಮಾಡುತ್ತಿರುವುದು ಶೋಚನೀಯ. ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಮೆಚ್ಚಿಸಲು ನಡೆದುಕೊಂಡ ರೀತಿ ಇದು. ಈ ಮೂಲಕ ಕಾಂಗ್ರೆಸ್‍ನ ತಾರತಮ್ಯ ಧೋರಣೆ ಅನಾವರಣ ಆಗಿದೆ’ ಎಂದರು.

‘ಉತ್ತರ ಕನ್ನಡ ಜಿಲ್ಲೆಯಲ್ಲಿ ಅಂಕೋಲಾ, ಕುಮಟಾ, ಹೊನ್ನಾವರ, ಸಿದ್ದಾಪುರ ಭಾಗದಲ್ಲಿ ಹೆಚ್ಚಾಗಿ ಜಿಲ್ಲೆಯಲ್ಲಿ ಸುಮಾರು ಮನೆಗಳು ಸಂಪೂರ್ಣ ನಾಶವಾಗಿವೆ. ಸುಮಾರು 500 ಮನೆಗಳು ಅರ್ಧ ನಾಶವಾಗಿವೆ. ಅಂಕೋಲಾ ಉಳುವರೆ ಒಂದೇ ಭಾಗದಲ್ಲಿ ಕಾಳಜಿ ಕೇಂದ್ರದಲ್ಲಿ 118 ಜನ ಇದ್ದರು. ಎನಡಿಆರ್‌ಎಫ್ ಪರಿಹಾರ ₹ 1.20 ಲಕ್ಷ ಕೊಡಲಾಗುತ್ತಿದೆ. ತಾವು ಆರ್ಥಿಕ ತಜ್ಞರಲ್ಲವೇ? ₹1.20 ಲಕ್ಷಕ್ಕೆ ಮನೆ ಕಟ್ಟಲು ಸಾಧ್ಯವೇ? ಈ ಹಿಂದೆ ಯಡಿಯೂರಪ್ಪ ಸಿಎಂ ಆಗಿದ್ದಾಗ ₹ 5 ಲಕ್ಷ ಕೊಟ್ಟಿದ್ದರು. ಈಗಲೂ ಅದೇ ಮೊತ್ತ ನೀಡಬೇಕು. 15 ದಿನಗಳೊಳಗೆ ಮನೆ ಕಳೆದುಕೊಂಡವರಿಗೆ ಯಾವುದೇ ವಿಶೇಷ ಪರಿಹಾರ ನೀಡಲ್ಲ ಎಂದರೆ ಪ್ರತಿಭಟನೆ ನಡೆಸಲಾಗುವುದು’ ಎಂದರು.

ಬಿಜೆಪಿಯ ಶೋಭಾ ನಾಯ್ಕ, ಜಿ.ಎಹೆಗಡೆ ಸೋಂದಾ, ಗುರು ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.