ಶಿರಸಿ: ಸಹಕಾರ ವ್ಯವಸ್ಥೆಯಲ್ಲಿ ಶತಮಾನ ಪೂರೈಸಿರುವ ಇಲ್ಲಿಯ ತೋಟಗಾರ್ಸ್ ರೂರಲ್ ಕೋ ಆಪರೇಟಿವ್ ಅಗ್ರಿಕಲ್ಚರಲ್ ಮಲ್ಟಿಪರ್ಪಸ್ ಸೊಸೈಟಿ (ಟಿ.ಆರ್.ಸಿ.)ಯು 2023-24ನೇ ಸಾಲಿನಲ್ಲಿ ₹1.20 ಕೋಟಿ ಲಾಭ ಗಳಿಸುವುದರೊಂದಿಗೆ ಎಲ್ಲಾ ವಿಭಾಗಗಳಲ್ಲೂ ಪ್ರಗತಿ ಸಾಧಿಸಿದೆ.

ಸಂಘದ ಅಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ ಈ ಕುರಿತು ಬುಧವಾರ ಪ್ರಕಟಣೆ ನೀಡಿದ್ದು, ಸದಸ್ಯರು ಪ್ರಾಮಾಣಿಕವಾಗಿ ಹಾಗೂ ಭಾವನಾತ್ಮಕವಾಗಿ ವ್ಯವಹರಿಸಿರುವುದರ ಪರಿಣಾಮವಾಗಿ ಸಂಘವು ಆರ್ಥಿಕವಾಗಿ ಸದೃಢಗೊಂಡು ರೈತರ ಆಶೋತ್ತರಗಳನ್ನು ಈಡೇರಿಸುವಂತಾಗಿದೆ. ಬದಲಾದ ಕಾಲ ವ್ಯವಹಾರಗಳಿಗೆ ಅನುಗುಣವಾಗಿ ಸಂಘವು ತನ್ನ ವ್ಯವಹಾರಗಳನ್ನು ಆಧುನಿಕರಣಗೊಳಿಸಿ ಸದಸ್ಯರಿಗೆ ಗರಿಷ್ಠ ಸೇವೆ ನೀಡುವಲ್ಲಿ ಕಾರ್ಯಪ್ರವೃತ್ತವಾಗಿದೆ. ಸರ್ಕಾರದಿಂದ ರೈತರಿಗೆ ಸಿಗುವ ಬಡ್ಡಿ ರಿಯಾಯಿತಿ ಸಾಲಗಳನ್ನು ಸಕಾಲಿಕವಾಗಿ ಒದಗಿಸುತ್ತ ಬಂದಿದ್ದು, ₹ 35 ಕೋಟಿಗೂ ಮೀರಿ ಕೃಷಿಕರಿಗೆ ಶೂನ್ಯ ಬಡ್ಡಿದರ ಅನ್ವಯವಾಗುವಂತೆ ಬೆಳೆಸಾಲ ನೀಡಿ ರಾಜ್ಯದಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿ ಬೆಳೆಸಾಲ ನೀಡುವ ಸಹಕಾರ ಸಂಘಗಳ ಅಗ್ರಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ ಎಂದು ತಿಳಿಸಿದ್ದಾರೆ.

ಕಳೆದ ಮಾರ್ಚ್ ಅಂತ್ಯಕ್ಕೆ ಸಂಘದ ದುಡಿಯುವ ಬಂಡವಾಳ ₹141.54 ಕೋಟಿ ಇದ್ದು, ಸದಸ್ಯರಿಗೆ ವಿತರಿಸಿದ ಸಾಲ ₹ 109.04 ಕೋಟಿ ಆಗಿದೆ. ಸಾಲ ವಸೂಲಿ ಪ್ರಮಾಣ ಶೇ 99.91ರಷ್ಟಿದೆ.

ಆ.28 ರಂದು ಸಂಘದ 111ನೇ ವಾರ್ಷಿಕ ಸರ್ವ ಸಾಧಾರಣ ಸಭೆಯು ಬೆಳಿಗ್ಗೆ 10ಕ್ಕೆ ಸಂಘದ ಸಭಾಭವನದಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.