ದಾಂಡೇಲಿ (ಉತ್ತರ ಕನ್ನಡ ಜಿಲ್ಲೆ): ಕಾಳಿ ನದಿ ಹಿನ್ನೀರು ಪ್ರದೇಶವಾದ ಬೀರಂಪಾಲಿಯ ಅಕ್ವಾಡ ಗ್ರಾಮದ ಹತ್ತಿರ ನಾಲ್ವರು ಮಕ್ಕಳು ಸೇರಿದಂತೆ, ಒಂದೇ ಕುಟುಂಬದ ಆರು ಜನ ಪ್ರವಾಸಿಗರು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಭಾನುವಾರ ಸಂಜೆ ಮೃತಪಟ್ಟಿದ್ದಾರೆ.

ಹುಬ್ಬಳ್ಳಿಯ ಈಶ್ವರ ನಗರದ ನಿವಾಸಿಗಳಾದ ನಜೀರ್ ಅಹ್ಮದ್ ಹೊಂಬಳ (40), ಅಲ್ಛೀಯಾ ಅಹ್ಮದ್ (10), ಮೋಹಿನ್ ಅಹ್ಮದ್ (6), ಬೆಂಗಳೂರಿನ ನಿವಾಸಿಗಳಾದ ರೇಷಾ ಉನ್ನಿಸಾ ತೋಸಿಫ್ ಅಹ್ಮದ್ (38), ಇಫ್ರಾ ತೋಸಿಫ್ ಅಹ್ಮದ್ (15), ಅಬೀದ್ ಅಹ್ಮದ್ (12) ಮೃತರು. ಪ್ರವಾಸಕ್ಕೆ ಬಂದಿದ್ದ ಎಂಟು ಮಂದಿಯಲ್ಲಿ ಇಬ್ಬರು ಅಪಾಯದಿಂದ ಪಾರಾಗಿದ್ದಾರೆ.

‘ಹುಬ್ಬಳ್ಳಿಯಿಂದ ದಾಂಡೇಲಿಯ ಪ್ರವಾಸಕ್ಕೆ ಕುಟುಂಬ ಸಮೇತರಾಗಿ ಎಂಟು ಜನರು ಬಂದಿದ್ದು ನದಿ ನೀರಿನಲ್ಲಿ ಆಟ ಆಡುತ್ತಿದ್ದಾಗ ಆಳ ನೀರಿಗೆ ಕಾಲು ಜಾರಿದ ಮಕ್ಕಳನ್ನು ರಕ್ಷಿಸಲು ಮುಂದಾದರು. ಒಬ್ಬರ ನಂತರ ಒಬ್ಬರು ಮುಳುಗಿ ಮೃತಪಟ್ಟಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಕುರಿತು ದಾಂಡೇಲಿ ಗ್ರಾಮೀಣ ಠಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.