ಕಾರವಾರ: ಜಿಲ್ಲಾ ಕೇಂದ್ರದಲ್ಲಿರುವ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯನ್ನು (ಕ್ರಿಮ್ಸ್) ಮೇಲ್ದರ್ಜೆಗೇರಿಸಿ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ಸ್ಥಾಪಿಸುವಂತೆ ನಗರದ ಮಹಿಳೆಯೊಬ್ಬರು ಕೇದಾರನಾಥ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಬೇಡಿಕೆಯ ಕುರಿತು ದೇವಾಲಯದ ಎದುರು ಮಹಿಳೆ ಬ್ಯಾನರ್ ಪ್ರದರ್ಶಿಸಿದ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ನಗರದ ಅಪರ್ಣಾ ಸತೀಶ ಪ್ರಭು ಕೇದಾರನಾಥ ದೇವಾಲಯದಲ್ಲಿ ಆಸ್ಪತ್ರೆ ಸ್ಥಾಪನೆಗೆ ಪ್ರಾರ್ಥಿಸಿದವರಾಗಿದ್ದಾರೆ. ಈಚೆಗೆ ಉತ್ತರ ಭಾರತದ ಪ್ರವಾಸ ಕೈಗೊಂಡಿದ್ದ ಅವರು ಪ್ರಖ್ಯಾತ ಧಾರ್ಮಿಕ ತಾಣದ ಎದುರು ಜಿಲ್ಲೆಯ ಜನರ ಬೇಡಿಕೆಯ ಕುರಿತ ವಿಷಯವನ್ನು ಬ್ಯಾನರ್ ಮೂಲಕ ಪ್ರದರ್ಶಿಸಿದ್ದರು.

‘ಜಿಲ್ಲೆಯಲ್ಲಿ ಜನರು ತೀವ್ರ ಅನಾರೋಗ್ಯಕ್ಕೆ ತುತ್ತಾದರೆ, ಅವಘಡ ಸಂಭವಿಸಿದರೆ ಚಿಕಿತ್ಸೆಗೆ ಸುಸಜ್ಜಿತ ಆಸ್ಪತ್ರೆ ಇಲ್ಲ. ಕ್ರಿಮ್ಸ್ ಸ್ಥಾಪನೆಯಾಗಿದ್ದರೂ ಅದನ್ನು ಮೇಲ್ದರ್ಜೆಗೇರಿಸಿ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯಾಗಿಸಲು ಕ್ರಮವಾಗಿಲ್ಲ. ಹೀಗಾಗಿ ಈ ಬಗ್ಗೆ ಗಮನಸೆಳೆಯಲು ದೇಶದ ಆಕರ್ಷಣೀಯ ತಾಣದ ಎದುರು ಬ್ಯಾನರ್ ಪ್ರದರ್ಶಿಸಬೇಕಾಯಿತು’ ಎಂದು ಅಪರ್ಣಾ ಪ್ರತಿಕ್ರಿಯಿಸಿದ್ದಾರೆ.

ಸದ್ಯ ಜಿಲ್ಲೆಯಲ್ಲಿ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ಸ್ಥಾಪನೆಗೆ ಒತ್ತಡ ಹೆಚ್ಚುತ್ತಿದೆ. ಅದಕ್ಕಾಗಿ ಪ್ರತಿಭಟನೆ ನಡೆಸಲು ವಿವಿಧ ಸಂಘಟನೆಗಳು ಸಜ್ಜುಗೊಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.