ಹೂವಿನಹಡಗಲಿ (ವಿಜಯನಗರ ಜಿಲ್ಲೆ) : ಪ್ರಧಾನಿ ನರೇಂದ್ರ ಮೋದಿಯವರನ್ನು ಕ್ಷೇತ್ರದ ಕಾಂಗ್ರೆಸ್ ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಅವರು ಅವಾಚ್ಯ ಪದಗಳಿಂದ ನಿಂದಿಸಿರುವ ವಿಡಿಯೊ ಸಂಭಾಷಣೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಹರಪನಹಳ್ಳಿ ತಾಲ್ಲೂಕಿನ ತೋಟವೊಂದರಲ್ಲಿ ಪರಮೇಶ್ವರನಾಯ್ಕ ತಮ್ಮ ಬೆಂಬಲಿಗರ ಜತೆ ರಾಜಕೀಯ ಚರ್ಚೆ ನಡೆಸುತ್ತಿರುವಾಗ ಪ್ರಧಾನಿಯನ್ನು ಉಲ್ಲೇಖಿಸಿ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಪೆಟ್ರೋಲ್, ಡಿಸೇಲ್ ದರ ಏರಿಕೆಯನ್ನು ಪ್ರಸ್ತಾಪಿಸಿ ಅವರು ಪ್ರಧಾನಿಯನ್ನು ನಿಂದಿಸಿದ್ದಾರೆ.

ಈ ಕುರಿತ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದ್ದು, ಬಿಜೆಪಿ ಮುಖಂಡರು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

" ಆ ಹೆಣ್ಣು ಮಕ್ಕಳಿಗೆ (ಎಂ.ಪಿ.ಪ್ರಕಾಶ್ ಪುತ್ರಿಯರು) ಓಟ್ ಹಾಕಿದ್ರೆ ನಿಮ್ಮ ಕೈಗೆ ಸಿಗ್ತಾರೇನು. ನಿಮ್ಮ ದುರಾದೃಷ್ಟಕ್ಕೆ ಪಕ್ಷ ಅವರಿಗೆ ಟಿಕೆಟ್ ಕೊಟ್ರೆ ನಿಮ್ದು ಇನ್ನೂ ಕಷ್ಟ ಐತಿ. ಅವರನ್ನು ಕಾಣಾಕ ಬೆಂಗಳೂರಿಗೆ ಹೋಗಬೇಕಾಗತೈತಿ. ಅವರೇನು ಪರಮೇಶ್ವರ ನಾಯ್ಕ ಏನು ಕ್ಷೇತ್ರದಲ್ಲಿ ನಾಲ್ಕು ಇರ್ಲಿಕ್ಕೆ. ಜನ್ರೂ ಹಂಗೇ ಇದ್ದಾರೆ. ಚುನಾವಣೆಯಲ್ಲಿ 500 ಕೊಟ್ಟವರಿಗೆ ಓಟ್ ಹಾಕ್ತಾರೆ ಎಂದು ಅವರು ಮತದಾರರನ್ನು ಜರಿದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.