ಹೊಸಪೇಟೆ (ವಿಜಯನಗರ): ಇಲ್ಲಿಗೆ ಸಮೀಪದ ವ್ಯಾಸನಕೇರಿ ಮತ್ತು ವ್ಯಾಸ ಕಾಲೋನಿ ರೈಲು ನಿಲ್ದಾಣಗಳ ನಡುವೆ ಗುರುವಾರ ಸಂಜೆ ಗೂಡ್ಸ್ ರೈಲೊಂದು ಹಳಿ ತಪ್ಪಿದ್ದರಿಂದ ಹೊಸಪೇಟೆ–ಹರಿಹರ ನಡುವಿನ ಮೂರು ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿದೆ.

ಗೂಡ್ಸ್ ರೈಲಿನ 12 ವ್ಯಾಗನ್‌ಗಳು ಹಳಿ ತಪ್ಪಿದ್ದು, ಯಾವುದೇ ಜೀವಹಾನಿ ಸಂಭವಿಸಿಲ್ಲ. ವ್ಯಾಗನ್‌ಗಳನ್ನು ಮತ್ತೆ ಹಳಿಗೆ ತರುವ ಮತ್ತು ಹಾನಿಗೊಳಗಾದ ರೈಲು ಹಳಿಗಳನ್ನು ಸರಿಪಡಿಸುವ ಕೆಲಸ ನಡೆಯುತ್ತಿದೆ.

ರೈಲು ಹಳಿ ತಪ್ಪಿದ್ದರಿಂದಾಗಿ ಹೊಸಪೇಟೆ–ಹರಿಹರ (ರೈಲು ಸಂಖ್ಯೆ 06245), ಹರಿಹರ–ಬಳ್ಳಾರಿ ಡೆಮು (07396) ಮತ್ತು ಬಳ್ಳಾರಿ–ಹೊಸಪೇಟೆ ಡೆಮು (07398) ರೈಲುಗಳ ಸಂಚಾರ ರದ್ದುಪಡಿಸಲಾಗಿದೆ. ವಿಜಯಪುರ –ಯಶವಂತಪುರ ಎಕ್ಸ್‌ಪ್ರೆಸ್ (06546) ಹಾಗೂ ಯಶವಂತಪುರ–ವಿಜಯಪುರ ಎಕ್ಸ್‌ಪ್ರೆಸ್ (06545) ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಈ ಎರಡು ರೈಲುಗಳು ಬಳ್ಳಾರಿ ಕಂಟೋನ್ಮೆಂಟ್, ರಾಯದುರ್ಗ, ಚಿಕ್ಕಜಾಜೂರು ಮೂಲಕ ಸಂಚರಿಸಲಿವೆ ಎಂದು ನೈರುತ್ಯ ರೈಲ್ವೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.