ಹೊಸಪೇಟೆ (ವಿಜಯನಗರ): ‘ಬಜರಂಗ ದಳ ನಿಷೇಧ ಮಾಡುವುದಕ್ಕಾಗಿಯೇ ಪಿಎಫ್‌ಐ ಸಂಘಟನೆಯ ಹೆಸರನ್ನು ಮುನ್ನಲೆಗೆ ತರಲಾಗಿದೆ’ ಎಂದು ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ ಆರೋಪಿಸಿದರು.

ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಮರಬ್ಬಿಹಾಳು ಗ್ರಾಮದಲ್ಲಿ ಪಕ್ಷದ ಪರ ಮತಯಾಚಿಸಿ ಮಾತನಾಡಿದ ಅವರು, ಕೊಲೆಗಡುಕರು, ಲೂಟಿಕೋರ ಸಂಘಟನೆಯನ್ನು ರಾಜ್ಯ ಸರ್ಕಾರ ನಿಷೇಧಿಸಿದೆ. ಆದರೆ. ಮುಸ್ಲಿಮರ ಓಲೈಕೆಗಾಗಿಯೇ ಕಾಂಗ್ರೆಸ್, ಬಜರಂಗ ದಳ ನಿಷೇಧದ ಪ್ರಸ್ತಾವವನ್ನು ಪ್ರಣಾಳಿಕೆಯಲ್ಲಿ ಸೇರಿಸಿದೆ ಎಂದು ಹೇಳಿದರು.

23 ಹಿಂದೂ ಯುವಕರ ಕಗ್ಗೊಲೆಗೆ ಕಾರಣವಾದ ಪಿಎಫ್‍ಐ ಸಂಘಟನೆಯನ್ನು ರಾಜ್ಯ ಸರ್ಕಾರ ನಿಷೇಧಿಸಿದೆ. ಈಗ ಮತ್ತೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಪಿಎಫ್‍ಐ ನಿಷೇಧದ ಉಲ್ಲೇಖ ಮಾಡಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.