ಹೊಸಪೇಟೆ (ವಿಜಯನಗರ): ‘ಕತ್ತೆ ನೀಡಿ ಅದರ ಹಾಲು ಖರೀದಿಸುವ ವ್ಯವಹಾರದಲ್ಲಿ ತೊಡಗಿದ್ದ ‘ಜೆನ್ನಿ ಮಿಲ್ಕ್’ ಕಂಪನಿ ವಿರುದ್ಧ 278 ಮಂದಿ ದೂರು ನೀಡಿದ್ದು, ₹13.51 ಕೋಟಿ ವಂಚನೆಯಾಗಿರುವ ಸಾಧ್ಯತೆ ಇದೆ, ಹೀಗಾಗಿ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲು ಕೋರಿಕೆ ಸಲ್ಲಿಸಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಶ್ರೀಹರಿಬಾಬು ಬಿ.ಎಲ್.ತಿಳಿಸಿದರು.

‘ಮುಖ್ಯ ಆರೋಪಿ ನೂತಲಪತಿ ಮುರಳಿ ಮತ್ತು ಇತರ ನಾಲ್ವರ ಪತ್ತೆಗಾಗಿ ಮೂರು ತಂಡಗಳನ್ನು ರಚಿಸಲಾಗಿದೆ. ಹುಡುಕಾಟ ನಡೆಯುತ್ತಿದೆ. ಆರೋಪಿ ಸಿಕ್ಕಿದರೆ ವಂಚನೆಯ ಪೂರ್ಣ ಮಾಹಿತಿ ಲಭಿಸಬಹುದು, ಇದು ಬಹುಕೋಟಿ ವಂಚನೆ ಪ್ರಕರಣವಾಗಿರುವುದರಿಂದ ಸಿಐಡಿ ತನಿಖೆ ಕುರಿತಂತೆ ಮೇಲಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ’ ಎಂದು ಅವರು ಬುಧವಾರ ಇಲ್ಲಿ ಮಾಧ್ಯಮದವರಿಗೆ ತಿಳಿಸಿದರು.

‘ವಂಚನೆಗೆ ಒಳಗಾದ ರೈತರು ಧೈರ್ಯ ಕಳೆದುಕೊಳ್ಳಬಾರದು, ತಾಳ್ಮೆಯಿಂದ ಇರಬೇಕು. ಆರೋಪಿಗಳನ್ನು ಶೀಘ್ರ ಹಿಡಿಯುವ ವಿಶ್ವಾಸ ಇದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.