ಹೊಸಪೇಟೆ (ವಿಜಯನಗರ): ನಗರದಲ್ಲಿ ಗಣೇಶ ಹಬ್ಬದ ಮೂರನೇ ದಿನವಾದ ಸೋಮವಾರ ರಾತ್ರಿ ವಿದ್ಯುತ್ ದೀಪಗಳ ಮೆರುಗಲ್ಲಿ ಗಣೇಶ ವಿಸರ್ಜನೆಯ ಶೋಭಾಯಾತ್ರೆಯ ಸೊಬಗು ರಂಗೇರಿತ್ತು.

ರಾತ್ರಿ 8 ಗಂಟೆ ವೇಳೆಗೆ ನಗರದ ವಿವಿಧ ರಸ್ತೆಗಳಲ್ಲಿ ವಿದ್ಯುತ್ ದೀಪಗಳಿಂದ ಝಗಮಗಿಸುತ್ತಿದ್ದ ಬೆಳಕಲ್ಲಿ ಲಾರಿ, ಟ್ರ್ಯಾಕ್ಟರ್, ಟಾಟಾ ಏಸ್ ವಾಹನ ಸೇರಿದಂತೆ ಇತರೆ ವಾಹನಗಳಲ್ಲಿ ಗಣೇಶನ ಮೂರ್ತಿಗಳನ್ನು ಇಟ್ಟುಕೊಂಡು ಸಾಗುತ್ತಿದ್ದ ಶೋಭಾಯಾತ್ರೆ ಜನಮನ ಸೂರೆಗೊಂಡಿತು.

ಮೆರವಣಿಗೆಯ ಉದ್ದಕ್ಕೂ ಬಾಣಬಿರುಸು ಹಾಗೂ ಭಾಜಭಜಂತ್ರಿ, ರಾಷಾ ತಾಂಡೋಲು, ಡ್ರಮ್ ಸೆಟ್, ಡಿಜೆ ಅಬ್ಬರ ಜೋರಾಗಿತ್ತು. ಯುವಕರ ನೃತ್ಯಕ್ಕೂ ಲಗಾಮು ಇರಲಿಲ್ಲ.

ಹೆಚ್ಚಿನ ಮೆರವಣಿಗಳು ನಗರದ ಹೃದಯ ಭಾಗವಾದ ಗಾಂಧಿ ಚೌಕ, ಮುಖ್ಯ ಮಸೀದಿ, ಬಸ್ ನಿಲ್ದಾಣ ಮೂಲಕ ಸಾಗಿ, ರೈಲು ನಿಲ್ದಾಣ ರಸ್ತೆಯಲ್ಲಿ ಮುಂದಕ್ಕೆ ಚಲಿಸಿದವು ಹಾಗೂ ಕೊನೆಗೆ ಎಲ್‌ಎಲ್‌ಸಿ ಕಾಲುವೆಯಲ್ಲಿ ಮೂರ್ತಿಗಳ ವಿಸರ್ಜನೆ ನಡೆಯಿತು. ಪೊಲೀಸರು ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.