ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸಪೇಟೆ: ಧರ್ಮಸಾಗರ ಗ್ರಾಮದಲ್ಲಿ 3 ವರ್ಷದ ಮಗುವಿಗೆ ಹುಚ್ಚುನಾಯಿ ಕಡಿತ

Published : 17 ಸೆಪ್ಟೆಂಬರ್ 2024, 8:32 IST
Last Updated : 17 ಸೆಪ್ಟೆಂಬರ್ 2024, 8:32 IST
ಫಾಲೋ ಮಾಡಿ
Comments

ಹೊಸಪೇಟೆ (ವಿಜಯನಗರ): ತಾಲ್ಲೂಕಿನ  ಧರ್ಮಸಾಗರದ ಗ್ರಾಮದಲ್ಲಿ ಮಂಗಳವಾರ ಮೂರು ವರ್ಷದ ಬಾಲಕಿಗೆ ಹುಚ್ಚುನಾಯಿ ಕಡಿದಿದೆ.

ಸ್ಥಳೀಯ ನಿವಾಸಿಗಳಾದ ರಾಮ ಮತ್ತು ಲೋಕಮ್ಮ ದಂಪತಿಯ ಪುತ್ರಿ ಜನನಿ ಗಾಯಗೊಂಡ ಮಗುವಾಗಿದ್ದು, ಆಕೆಯನ್ನು ಇದೀಗ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ಬಿಮ್ಸ್‌ ಆಸ್ಪತ್ರೆಗೆ ಕಳುಹಿಸಲಾಗಿದೆ.

‘ಬಾಲಕಿ ಅಪಾಯದಿಂದ ಪಾರಾಗಿದ್ದರೂ ಮುಖ, ಗಂಟಲಿನ ಭಾಗದಲ್ಲಿ  ಆಳವಾದ ಗಾಯವಾಗಿದೆ. ಹೀಗಾಗಿ ಇಲ್ಲಿನ 100 ಹಾಸಿಗೆ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಆಕೆಯನ್ನು ಬಳ್ಳಾರಿಗೆ ಕಳುಹಿಸಿಕೊಡಲಾಗಿದೆ. ಇತರ ಮೂನ್ನಾಲ್ಕು ಮಂದಿಗೆ ಸಹ ನಾಯಿ ಕಚ್ಚಿದೆ, ಅವರಿಗೆ ರೇಬಿಸ್‌ ಚುಚ್ಚುಮದ್ದು ನೀಡಲಾಗಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಲ್.ಆರ್‌.ಶಂಕರ್ ನಾಯ್ಕ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಕೂಲಿ ಕೆಲಸ ಮಾಡುವ ದಂಪತಿ: ‘ಮನೆ ಮುಂದೆ ಆಟವಾಡುತ್ತಿದ್ದಾಗ ಬಾಲಕಿಗೆ ನಾಯಿ ಕಚ್ಚಿದೆ. ಬಾಲಕಿಯ ಪೋಷಕರು ಕೂಲಿ ಕೆಲಸ ಮಾಡಿ ಜೀವನ ಸಾಗಿಸುವವರು. ಬೀದಿನಾಯಿಗಳ ಉಪಟಳ ಎಲ್ಲೆಡೆ ಇದ್ದು, ಹುಚ್ಚುನಾಯಿ ಕಾಟವೂ ಇದೀಗ ಶುರುವಾಗಿದೆ. ಬಾಲಕಿಗೆ ಕಚ್ಚಿದ ನಾಯಿಯನ್ನು ಕೊಂದು ಹಾಕಲಾಗಿದೆ. ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಸರ್ಕಾರ ಭರಿಸಬೇಕು ಹಾಗೂ ಪರಿಹಾರ ನೀಡಬೇಕು, ಗ್ರಾಮ ಪಂಚಾಯಿತಿಗಳು ಮತ್ತು ಇತರ ಸ್ಥಳೀಯ ಆಡಳಿತಗಳು ಬೀದಿನಾಯಿ ಮತ್ತು ಹುಚ್ಚುನಾಯಿಗಳ ಉಪಟಳ ತಡೆಗಟ್ಟಲು ಕ್ರಮ ಕೈಗೊಳ್ಳಬೇಕು’  ಎಂದು ಕಾಂಗ್ರೆಸ್ ಯುವ ಮುಖಂಡ ಭರತ್‌ ಕುಮಾರ್ ಸಿ.ಆರ್. ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT