ಹೊಸಪೇಟೆ (ವಿಜಯನಗರ): ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಎಂ.ಪಿ. ಲತಾ ಮಲ್ಲಿಕಾರ್ಜುನ ಅವರ ಸ್ಪರ್ಧೆಯಿಂದ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ನಿದ್ದೆಗೆಡುವಂತೆ ಮಾಡಿದೆ.

ಚುನಾವಣೆಗೆ ನಾಮಪತ್ರ ಸಲ್ಲಿಸುವ ಹೊಸ್ತಿಲಲ್ಲಿ ಕಾಂಗ್ರೆಸ್ ಪಕ್ಷ ಎನ್. ಕೊಟ್ರೇಶ್ ಅವರಿಗೆ ಟಿಕೆಟ್ ಘೋಷಿಸಿದ್ದರಿಂದ ಪಕ್ಷದ ವಿರುದ್ಧ ಮುನಿಸಿಕೊಂಡು ಲತಾ ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ. ಪಕ್ಷದ ಮುಖಂಡರು ಸಾಕಷ್ಟು ಮನವೊಲಿಕೆ ಮಾಡಿದರೂ ಅವರು ಚುನಾವಣಾ ಕಣದಿಂದ ಹಿಂದೆ ಸರಿದಿಲ್ಲ. ಇತ್ತೀಚೆಗೆ ಕ್ಷೇತ್ರದಲ್ಲಿ ಪ್ರಚಾರ ಕೈಗೊಂಡಿದ್ದ ಸಿದ್ದರಾಮಯ್ಯ ಕೂಡ ಕಣದಿಂದ ಈಗಲೂ ಲತಾ ಅವರು ಹಿಂದೆ ಸರಿಯಬಹುದು ಎಂದು ಹೇಳಿದ್ದರು. ಲತಾ ಅವರ ಸ್ಪರ್ಧೆಯಿಂದ ಕಾಂಗ್ರೆಸ್ ಚಿಂತೆ ಹೆಚ್ಚಿಸಿದೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ಬಿಜೆಪಿ ಮತಗಳನ್ನು ಲತಾ ಪಡೆಯಬಹುದು ಎಂಬ ಆತಂಕ ಬಿಜೆಪಿಗರಿಗೂ ಕಾಡುತ್ತಿದೆ. ಇದರಿಂದಾಗಿ ಸಹಜವಾಗಿಯೇ ಕ್ಷೇತ್ರ ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗಿದೆ.

ಹಾಲಿ ಶಾಸಕ ಜಿ. ಕರುಣಾಕರ ರೆಡ್ಡಿ ಅವರಿಗೆ ಕ್ಷೇತ್ರ ಉಳಿಸಿಕೊಳ್ಳುವ ಸವಾಲು ಇದೆ. ಚುನಾವಣೆ ಹೊಸ್ತಿಲಲ್ಲಿ ಕೆರೆ ತುಂಬಿಸುವ ಯೋಜನೆಗೆ ಚಾಲನೆ ಕೊಟ್ಟಿದ್ದಾರೆ. ಆದರೆ, ಅದು ಎಷ್ಟರಮಟ್ಟಿಗೆ ಫಲ ಕೊಡುತ್ತದೆ ಗೊತ್ತಿಲ್ಲ. ಆದರೆ, ಇವರ ಅವಧಿಯಲ್ಲಿ ಹೇಳಿಕೊಳ್ಳುವಂತಹ ಕೆಲಸಗಳಾಗಿಲ್ಲ ಎಂಬ ಆರೋಪಗಳಿವೆ.

2008ರ ಚುನಾವಣೆಯಲ್ಲಿ ಮಾಜಿಉಪಮುಖ್ಯಮಂತ್ರಿ ಎಂ.ಪಿ. ಪ್ರಕಾಶ್ ಅವರನ್ನು ಸೋಲಿಸಿ ಕರುಣಾಕರ ರೆಡ್ಡಿ ಇಡೀ ರಾಜ್ಯದ ಗಮನ ಸೆಳೆದಿದ್ದರು. ಆದರೆ, 2013ರ ಚುನಾವಣೆಯಲ್ಲಿ ಪ್ರಕಾಶ್ ಅವರ ಮಗ ಎಂ.ಪಿ. ರವೀಂದ್ರ ವಿರುದ್ಧ ಸೋಲು ಕಂಡಿದ್ದರು. ಆದರೆ, 2018ರ ಚುನಾವಣೆಯಲ್ಲಿ ರವೀಂದ್ರ ಅವರನ್ನು ಕರುಣಾಕರ ರೆಡ್ಡಿ ಸೋಲಿನ ರುಚಿ ತೋರಿಸಿದ್ದರು. ಹೀಗೆ ಕ್ಷೇತ್ರದ ಮತದಾರರು ಪ್ರತಿ ಚುನಾವಣೆಯಲ್ಲಿ ಬದಲಾವಣೆ ಮಾಡುತ್ತ ಬಂದಿದ್ದಾರೆ. ರವೀಂದ್ರ ಅವರ ನಿಧನದ ನಂತರ ಅವರ ಸಹೋದರಿಯರಾದ ಎಂ.ಪಿ. ಲತಾ ಹಾಗೂ ಎಂ.ಪಿ. ವೀಣಾ ಅವರು ಕ್ಷೇತ್ರದ ಟಿಕೆಟ್ ಮೇಲೆ ಕಣ್ಣಿಟ್ಟು ಕಾಂಗ್ರೆಸ್ನಲ್ಲಿ ಸಂಘಟನೆಯ ಕೆಲಸ ಮಾಡಿದ್ದರು. ಆದರೆ, ಇಬ್ಬರಿಗೂ ಪಕ್ಷ ಟಿಕೆಟ್ ಕೊಡಲಿಲ್ಲ. ಲತಾ ಅವರನ್ನು ಬೆಂಬಲಿಸಿ ವೀಣಾ ಕಣದಿಂದ ಹಿಂದೆ ಸರಿದು ಬೆಂಬಲ ಸೂಚಿಸಿದ್ದಾರೆ.

ತಂದೆಯ ಹೆಸರು ಹಾಗೂ ಸಹೋದರ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡು ಲತಾ ಕ್ಷೇತ್ರದಾದ್ಯಂತ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಹೆಣ್ಣು ಮಗಳನ್ನು ಬೆಂಬಲಿಸಿ, ಬದಲಾವಣೆ ತರಬೇಕೆಂದು ಅವರ ಬೆಂಬಲಿಗರು ಪ್ರಚಾರ ನಡೆಸುತ್ತಿದ್ದು, ಅನುಕಂಪದ ವಾತಾವರಣ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ.

ಇನ್ನೊಂದೆಡೆ ಕಾಂಗ್ರೆಸ್ನಿಂದ ಎನ್. ಕೊಟ್ರೇಶ್ ಕೂಡ ಗೆಲುವಿಗಾಗಿ ಸಾಕಷ್ಟು ಬೆವರು ಹರಿಸುತ್ತಿದ್ದಾರೆ. ಈ ಹಿಂದೆ ಜೆಡಿಎಸ್, ಪಕ್ಷೇತರರಾಗಿ ಸ್ಪರ್ಧಿಸಿ ಕೊಟ್ರೇಶ್ ಸೋಲು ಕಂಡಿದ್ದಾರೆ. ‘ಎರಡು ಸಲ ಸೋತಿರುವ ನನ್ನ ಬಗ್ಗೆ ಜನರಿಗೆ ಅನುಕಂಪ ಇದೆ. ಒಂದು ಸಲ ಅವಕಾಶ ಮಾಡಿಕೊಡಬೇಕು’ ಎಂದು ಸ್ವತಃ ಜನರೇ ಮಾತಾಡುತ್ತಿದ್ದಾರೆ. ಈ ಸಲ ಕ್ಷೇತ್ರದಲ್ಲಿ ಕಾಂಗ್ರೆಸ್ ಬಾವುಟ ಹಾರುವುದು ಖಚಿತ ಎಂಬ ಭರವಸೆಯ ಮಾತುಗಳನ್ನು ಆಡುತ್ತಿದ್ದಾರೆ. ಮಾಜಿ ಶಾಸಕ ಎನ್.ಎಂ. ನಬಿ ಅವರ ಮಗ ನೂರ್ ಅಹಮ್ಮದ್ ಕೂಡ ಕಣದಲ್ಲಿದ್ದಾರೆ. ಅವರು ಹೊರಗಿನವರು ಎಂಬ ಮಾತುಗಳು ಕೇಳಿ ಬಂದಿವೆ. ಎಎಪಿ, ಕೆಆರ್ಎಸ್ ಸೇರಿದಂತೆ ಒಟ್ಟು 15 ಜನ ಕಣದಲ್ಲಿದ್ದಾರೆ.

ಕ್ಷೇತ್ರದಲ್ಲಿ ಲಿಂಗಾಯತರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಕುರುಬರು, ಮುಸ್ಲಿಮರ ಮತಗಳು ಹೆಚ್ಚಿವೆ. ಇತರೆ ವರ್ಗದವರ ಮತಗಳು ನಿರ್ಣಾಯಕವಾಗಿವೆ. ಕರುಣಾಕರ ರೆಡ್ಡಿ ಅವರು ರೆಡ್ಡಿ, ಕೊಟ್ರೇಶ್– ಪಂಚಮಸಾಲಿ ಹಾಗೂ ಲತಾ ಅವರು ಜಂಗಮ ಸಮಾಜಕ್ಕೆ ಸೇರಿದವರು. ಮೂರು ಜನ ಅಭ್ಯರ್ಥಿಗಳು ತಮ್ಮ ಶಕ್ತಿ ಮೀರಿ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಬಿಜೆಪಿ–ಕಾಂಗ್ರೆಸ್ ನಡುವೆ ನೇರ ಹೋರಾಟದ ಕಣವಾಗಿದ್ದ ಕ್ಷೇತ್ರ ಲತಾ ಅವರ ಸ್ಪರ್ಧೆಯಿಂದ ರಂಗೇರಿದೆ. ಯಾರ ಮತ ಬುಟ್ಟಿಗೆ ಲತಾ ಕೈ ಹಾಕುತ್ತಾರೆ ಎಂಬ ಆತಂಕ ಕಾಂಗ್ರೆಸ್, ಬಿಜೆಪಿಯನ್ನು ಕಾಡುತ್ತಿದೆ. ಇನ್ನೊಂದೆಡೆ ಎರಡೂ ಪಕ್ಷಗಳಿಂದ ಬೇಸತ್ತಿರುವ ಜನ ಬದಲಾವಣೆ ಬಯಸಿ ಜಯ ತಂದುಕೊಡಲಿದ್ದಾರೆ ಎಂಬ ವಿಶ್ವಾಸದಲ್ಲಿ ಲತಾ ಬೆಂಬಲಿಗರಿದ್ದಾರೆ. ಅಂತಿಮವಾಗಿ ಮತದಾರರು ಯಾರ ಪರ ಒಲವು ತೋರಿಸುತ್ತಾರೆ ಎನ್ನುವುದಕ್ಕೆ ಮೇ 13ಕ್ಕೆ ಉತ್ತರ ಸಿಗಲಿದೆ.

ಕ್ಷೇತ್ರದ ಬೇಡಿಕೆಗಳೇನು?:

ಪಟ್ಟಣದಲ್ಲಿ ಶೌಚಾಲಯದಂತಹ ಕನಿಷ್ಠ ಸೌಕರ್ಯಗಳಿಲ್ಲ. ಅನೇಕ ಗ್ರಾಮಗಳು ಈಗಲೂ ಮೂಲಸೌಕರ್ಯದ ನಿರೀಕ್ಷೆಯಲ್ಲಿವೆ. ಕ್ಷೇತ್ರ ವ್ಯಾಪ್ತಿಯ ಎಲ್ಲ ಕೆರೆಗಳನ್ನು ತುಂಬಿಸಿ, ನೀರಾವರಿ ಮಾಡಬೇಕೆಂಬ ಕೂಗು ದಶಕಗಳಿಂದ ಇದೆ. ಇನ್ನು, ದುಡಿಯುವ ಕೈಗಳಿಗೆ ಉದ್ಯೋಗ ಕೊಡಬಲ್ಲ ಕೈಗಾರಿಕೆಗಳನ್ನು ಸ್ಥಾಪಿಸಬೇಕು. ಗ್ರಾಮೀಣ ಭಾಗದ ಮಕ್ಕಳಿಗೆ ಪಟ್ಟಣದಲ್ಲಿ ಹೆಚ್ಚಿನ ಹಾಸ್ಟೆಲ್ ಸೌಲಭ್ಯ ಕಲ್ಪಿಸಬೇಕು. ಕ್ಷೇತ್ರದಲ್ಲಿ ಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು ಕೊಡಬೇಕೆಂಬ ಬೇಡಿಕೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.