ಹೊಸಪೇಟೆ (ವಿಜಯನಗರ): ತುಂಗಭದ್ರಾ ಅಣೆಕಟ್ಟೆಯಿಂದ ಸದ್ಯ 29 ಗೇಟ್‌ಗಳಿಂದ 90 ಸಾವಿರದಿಂದ 1 ಲಕ್ಷ ಕ್ಯುಸೆಕ್‌ನಷ್ಟು ನೀರನ್ನು ನದಿಗೆ ಬಿಡಲಾಗುತ್ತಿದೆ. ಬೆಳಿಗ್ಗೆ 11ರ ಬಳಿಕ ಎಲ್ಲಾ ಗೇಟ್‌ಗಳನ್ನು ತೆರೆದು ನದಿಗೆ 1.50 ಲಕ್ಷ ಕ್ಯುಸೆಕ್‌ಗೂ ಅಧಿಕ ನೀರು ಬಿಡುವ ಬಗ್ಗೆ ತುಂಗಭದ್ರಾ ಮಂಡಳಿ ಚಿಂತನೆ ನಡೆಸಿದೆ.

ಇದಕ್ಕೆ ಪೂರಕವಾಗಿ ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಹೇಳಿಕೆ ಬಿಡುಗಡೆ ಮಾಡಿದ್ದು, 2 ಲಕ್ಷ ಕ್ಯುಸೆಕ್‌ನಷ್ಟು ನೀರು ಬಿಟ್ಟರೂ ನದಿ ಪಾತ್ರದ ಜನರು ಆತಂಕಪಡಬೇಕಿಲ್ಲ ಎಂದು ಹೇಳಿದ್ದಾರೆ.

’ಕೆಲವು ದಿನಗಳ ಹಿಂದೆ 1.80 ಲಕ್ಷ ಕ್ಯುಸೆಗ್‌ಗಿಂತ ಅಧಿಕ ನೀರನ್ನು ನದಿಗೆ ಹರಿಸಲಾಗಿತ್ತು. ಆಗಲೂ ಏನೂ ತೊಂದರೆ ಆಗಿರಲಿಲ್ಲ. ಈಗಲೂ ಜನ ಭಯಗೊಳ್ಳಬಾರದು. ಅಣೆಕಟ್ಟೆಯ ಸುರಕ್ಷತೆಯ ದೃಷ್ಟಿಯಿಂದ ಮತ್ತು ಬದಲಿ ಗೇಟ್ ಅಳವಡಿಕೆ ತುರ್ತಾಗಿ ಆಗಬೇಕಿರುವುದರಿಂದ ನೀರು ಹೊರಬಿಡುವುದು ಅನಿವಾರ್ಯ. ಜನರು ಸಹಕರಿಸಬೇಕು’ ಎಂದು ಅವರು ಮನವಿ ಮಾಡಿದ್ದಾರೆ.
.ತುಂಗಭದ್ರಾ ಜಲಾಶಯ: ನದಿಪಾತ್ರದ ಜನ ಎಚ್ಚರದಿಂದ ಇರಲು ಸೂಚನೆ.ತುಂಗಭದ್ರಾ ಜಲಾಶಯ: ನೀರು ಹರಿವಿನ ರಭಸಕ್ಕೆ ಕಾಣದ ಗೇಟ್.ತುಂಗಭದ್ರಾ ಜಲಾಶಯ | ಮುರಿದ 19ನೇ ಗೇಟ್–ಬೆಂಗಳೂರಿನಿಂದ ಬರಲಿದೆ ತಜ್ಞರ ತಂಡ.ತುಂಗಭದ್ರಾ ಜಲಾಶಯ: 60 ಟಿಎಂಸಿ ಅಡಿ ನೀರು ಖಾಲಿಮಾಡಿದರಷ್ಟೇ ದುರಸ್ತಿಗೆ ಅವಕಾಶ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.